ಲೋಕಾಯುಕ್ತ ಪೊಲೀಸರಿಂದ ಜನ ಸಂಪರ್ಕ ಸಭೆ – 13 ದೂರು ಸ್ವೀಕಾರ

(ನ್ಯೂಸ್ ಕಡಬ)newskadaba.com ಮಂಗಳೂರು, ಆ.10. ಕರ್ನಾಟಕ ಲೋಕಾಯುಕ್ತದ ಮಂಗಳೂರು ವಿಭಾಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಜನ ಸಂಪರ್ಕ ಸಭೆಯು ಪುತ್ತೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಂದ ಒಟ್ಟು 13 ದೂರುಗಳು ಸ್ವೀಕೃತವಾಗಿದ್ದು, ಪ್ರಮುಖವಾಗಿ ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಗಳಿಗೆ ಸಂಬಂಧಿಸಿದ್ದವಾಗಿದ್ದು, ಕೆಲವು ದೂರುಗಳನ್ನು ಸ್ಥಳದಲ್ಲಿ ಪರಿಹರಿಸಲಾಗಿದ್ದು ಬಾಕಿ ಉಳಿದ ದೂರುಗಳನ್ನು ಶೀಘ್ರದಲ್ಲಿ ಇತ್ಯರ್ಥ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಲಾಗಿದೆ.

ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಸೈಮನ್ ಸಿ.ಎ. ಅವರ ಉಪಸ್ಥಿತಿಯಲ್ಲಿ ಪುತ್ತೂರು ತಹಶೀಲ್ದಾರ್ ಶಿವಶಂಕರ್, ಡಿವೈಎಸ್ಪಿ ಚೆಲುವರಾಜ ಬಿ, ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ವಿನಾಯಕ ಬಿಲ್ಲವ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Also Read  ಕಡಬ ಸೇರಿದಂತೆ 50 ನೂತನ ತಾಲೂಕು ಪಂಚಾಯತ್ ರಚನೆ ➤ ಇನ್ಮುಂದೆ ಕಡಬಕ್ಕೆ ತಾಲೂಕು ಪಂಚಾಯತ್ ಭಾಗ್ಯ

error: Content is protected !!
Scroll to Top