ವಾರಸುದಾರರಿಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರ

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ನಾಲ್ಕು ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರವನ್ನು ನಗರ ಪೊಲೀಸ್ ಠಾಣೆ ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಸೇರಿಕೊಂಡು ಬೀಡಿನಗುಡ್ಡೆಯ ಹಿಂದುರುದ್ರ ಭೂಮಿಯಲ್ಲಿ ಗೌರಯುತವಾಗಿ ನಡೆಸಿದರು.


ಎ.ಎಸ್.ಐ ಜಯಕರ್, ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್, ತನಿಖಾ ಸಹಾಯಕ ಕಾನೂನು ಪ್ರಕ್ರಿಯೆ ನಡೆಸಿದ್ದು, ಮೃತರ ವಾರಸುದಾರರ ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಯುವಿಕೆಯ ಕಾಲಮಿತಿ ಕಳೆದರೂ ಮೃತರ ಸಂಬಂಧಿಕರು ಇಲಾಖೆಯನ್ನು ಸಂಪರ್ಕಿಸಿರಲ್ಲ. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಮುಂದಾಳತ್ವ ವಹಿಸಿದ್ದರು. ಯತೀಶ್, ಸಾಜಿ ಕುಮಾರ್, ಅಣ್ಣಪ್ಪ ಪೂಜಾರಿ ಕರಂಬಳ್ಳಿ, ಫ್ಲವರ್ ವಿಷ್ಣು, ಪ್ರದೀಪ್ ಹಾಗೂ ಜಿಲ್ಲಾಸ್ಪತ್ರೆ, ನಗರಸಭೆ ಸಹಕರಿಸಿದೆ.

Also Read  ವಕ್ಫ್ ಬೋರ್ಡ್ ಮೂಲಕ ರೈತರಿಗೆ ನೋಟಿಸ್ ನೀಡುವ ವಿರುದ್ಧ ರಾಜ್ಯಾದ್ಯಂತ ಹೋರಾಟ

error: Content is protected !!
Scroll to Top