ಯುವತಿಯ ಮಾನಹಾನಿಯಾಗುವಂತೆ ವರ್ತಿಸಿದ ಆರೋಪಿಗೆ ಶಿಕ್ಷೆ

(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಯುವತಿಯ ಮಾನ ಹಾನಿಯಾಗುವಂತೆ ವರ್ತಿಸಿದ್ದ ಆರೋಪಿಗೆ 3 ವರ್ಷ ಕಾರಾಗೃಹ ವಾಸ ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿ, 1ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಆದೇಶಿಸಿದ್ದಾರೆ ಎನ್ನಲಾಗಿದೆ.


ಉಡುಪಿಯ ಬೈಕಾಡಿ ಗ್ರಾಮದ ಗೋಪಾಲ ಹಾಗೂ ಪುತ್ತೂರು ಗ್ರಾಮದ ಬಾಲಕೃಷ್ಣ ಇವರುಗಳ ಪೈಕಿ ಆರೋಪಿ ಬಾಲಕೃಷ್ಣ ಮಣಿಪಾಲದ ದೂರದರ್ಶನ ಕಛೇರಿಯಲ್ಲಿ ನೌಕರನಾಗಿದ್ದು, ಅದೇ ಕಛೇರಿಯಲ್ಲಿರುವ ಪುರುಷ ಸಿಬ್ಬಂದಿಯೊಂದಿಗೆ, ಮಹಿಳಾ ಸಹೋದ್ಯೋಗಿ ಸಲುಗೆಯಿಂದ ಒಟ್ಟಿಗೆ ಇರುವ ವೇಳೆ, ಅವರಿಗೆ ತಿಳಿಯದಂತೆ, ಅವರ ಛಾಯಾ ಚಿತ್ರವನ್ನು ಮೊಬೈಲ್‌ ನಲ್ಲಿ ತೆಗೆದು ಅದನ್ನು ಗೋಪಾಲನಿಗೆ ನೀಡಿದ್ದು, ಇವರಿಬ್ಬರೂ ಮಹಿಳೆಗೆ ಲೈಂಗಿಕ ಬೇಡಿಕೆ ಇಡುತ್ತಿದ್ದು, ಸದ್ರಿಯವರು ಇದಕ್ಕೆ ಒಪ್ಪದಿದ್ದಾಗ ಆರೋಪಿ ಗೋಪಾಲನು ಊರಿನಲ್ಲಿ ಅವರ ಅಶ್ಲೀಲ ಛಾಯಾಚಿತ್ರಗಳನ್ನು ತೋರಿಸಿ ಅವರ ಮಾನಕ್ಕೆ ಧಕ್ಕೆಯನ್ನು ಉಂಟು ಮಾಡಿರುತ್ತಾರೆ.

Also Read  ಮೊಬೈಲ್ ನೋಡುತ್ತಾ ಬಸ್ ಚಲಾವಣೆ ಪ್ರಕರಣ - ಲೈಸನ್ಸ್ ಕ್ಯಾನ್ಸಲ್ ಮಾಡಲು ಸೂಚನೆ

error: Content is protected !!
Scroll to Top