(ನ್ಯೂಸ್ ಕಡಬ)newskadaba.com ಉಡುಪಿ, ಆ.10. ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರೂ ಶ್ರೀಕೃಷ್ಣಮಠದ ಆಸ್ಥಾನ ವಿದ್ವಾಂಸರೂ ಆಗಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಸ್ಕೃತ ವಿದ್ವಾಂಸ ವಿದ್ವಾನ್ ಕೆ. ಹರಿದಾಸ ಉಪಾಧ್ಯಾಯ ನಿಧನರಾದರು ಎನ್ನಲಾಗಿದೆ.
ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಅಧ್ಯಕ್ಷರಾದ ಅವರು, ಉಡುಪಿ ಅಷ್ಟಮಠಾಧೀಶರಿಂದ ಗೌರವಿಸಲ್ಪಟ್ಟಿದ್ದರು. ಸಂಸ್ಕತದಲ್ಲಿ 5 ಯಕ್ಷಗಾನ ಪ್ರಸಂಗ ರಚಿಸಿ ಉಜ್ಜಯಿನಿ ಮೊದಲಾದೆಡೆಗಳಲ್ಲಿ ಪ್ರದರ್ಶಿಸಿದ್ದರು. ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾಗಿ ಅನೇಕ ಮಂದಿ ಶಿಷ್ಯರಿಗೆ ವಿದ್ಯಾದಾನ ಮಾಡಿದ್ದರು. ಪ್ರಾಚಾರ್ಯ ಪದಕ್ಕೆ ಕನ್ನದಲ್ಲಿ ಪ್ರಾಂಶುಪಾಲ ಎಂಬ ಪದ ನಿಕ್ಷೇಪಿಸಿದ ಕೀರ್ತಿ ಉಪಾಧ್ಯಾಯರಿಗೆ ಸಲ್ಲುತ್ತದೆ. ಕರ್ನಾಟಕ ಸರಕಾರ ಹಾಗೂ ಅನೇಕ ಸಂಘಸಂಸ್ಥೆಗಳಿಂದ ಗೌರವ, ಸನ್ಮಾನ ಹಾಗೂ ಪ್ರಶಸ್ತಿಗಗಳಿಗೆ ಭಾಜನರಾಗಿದ್ದರು ಎಂದು ತಿಳಿದುಬಂದಿದೆ.