(ನ್ಯೂಸ್ ಕಡಬ)newskadaba.com ಕಾರವಾರ, ಆ.09. ರಾಜ್ಯದಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶವಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜನರಿಗೆ ಪರಿಹಾರ ನೀಡಿ ಸ್ಥಳಾಂತರ ಮಾಡುವ ಕಾರ್ಯ ಒಂದೆಡೆ ನಡೆಯುತ್ತಲೇ ಇದೆ.
ಇನ್ನೊಂದೆಡೆ ಸ್ಥಳಾಂತರ ಮಾಡಿದ ಕುಟುಂಬಗಳು ಬೆಳೆದ ತೋಟಗಾರಿಕಾ ಬೆಳೆಗಳನ್ನು ಅರಣ್ಯ ಇಲಾಖೆಯವರೇ ನಾಶ ಮಾಡುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಸ್ಥಳಾಂತರಗೊಂಡ ಕುಟುಂಬಗಳು ತಿಂಗಳುಗಟ್ಟಲೆ, ವರ್ಷಗಟ್ಟಲೆ ಜೋಪಾನ ಮಾಡಿರುವ ಅಡಕೆ ಹಾಗೂ ಇತ್ಯಾದಿ ತೋಟಗಳನ್ನು ನಿಮಿಷಗಳಲ್ಲೇ ನಾಶಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.