ಟೊಮೆಟೊ ಬೆಲೆಯಲ್ಲಿ ಭಾರಿ ಕುಸಿತ; ರೈತರಲ್ಲಿ ಆತಂಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಟೊಮೆಟೊ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ರೈತರಿಗೆ ಖುಷಿ ಕೊಟ್ಟಿತ್ತು. ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಮುಗಿಲು ಮುಟ್ಟಿದ್ದ ಟೊಮೆಟೊ ಬೆಲೆ ಈಗ ದಿಢೀರ್ ಕುಸಿತ ಕಾಣುತ್ತಿದೆ. ಬೆಲೆ ಏರಿಕೆ ಬಳಿಕ ಖುಷಿಯಾಗಿದ್ದ ರೈತರಲ್ಲಿ ದಿಢೀರ್ ಬೆಲೆ ಕುಸಿತವು ಆತಂಕ ಸೃಷ್ಟಿ ಮಾಡಿದೆ.


ಹಳ್ಳಿಯಿಂದ ದಿಲ್ಲಿವರೆಗೂ ಒಂದೇ ಮಾತು, ಅದು ಟೊಮೆಟೊ ಬೆಲೆ ಏರಿಕೆಯದ್ದು, ಪೆಟ್ರೋಲ್‌ಗಿಂತ ಡಬಲ್ ಬೆಲೆಗೆ ಮಾರಾಟ ಆಗಿದ್ದ ಟೊಮೆಟೊ ಈಗ ಮತ್ತೆ ಕುಸಿಯಲು ಆರಂಭಿಸಿದೆ. 15 ಕೆಜಿ ತೂಕದ ಬಾಕ್ಸ್ ಗೆ ಕಳೆದ ಕೆಲವು ವಾರದಿಂದ 2500 ಬೆಲೆ ಇತ್ತು. ಇದೀಗ ದಿಢೀರ್ ಬೆಲೆ ಕುಸಿತ ಕಾಣುತ್ತಿದ್ದು, ಟೊಮೆಟೊ ಬೆಳೆದ ರೈತರು ಕಂಗಾಲಾಗಿ ಹೋಗಿದ್ದಾರೆ.

Also Read  ಕಣಜದ ಹುಳುಗಳಿಂದ ಮಕ್ಕಳನ್ನು ರಕ್ಷಿಸಿದ ಗೃಹರಕ್ಷಕ ದಳದ ಸಿಬಂದಿ ಮೃತ್ಯು..!


ಕೆಲವೇ ದಿನದ ಹಿಂದೆ ಟೊಮೆಟೊ 15 ಕೆಜಿ ತೂಕದ ಬಾಕ್ಸ್‌ ಗೆ ₹ 2500ರಿಂದ ₹ 2600 ಬೆಲೆ ಇತ್ತು. ಆದರೆ ಇಂದು ಗರಿಷ್ಠ ಬೆಲೆ ₹1550ಕ್ಕೆ ಕುಸಿತ ಕಾಣುವ ಮೂಲಕ ರೈತರಿಗೂ ಶಾಕ್ ಕೊಟ್ಟಿದೆ. ಗಗನಕ್ಕೇರಿದ್ದ ಟೊಮೆಟೊ ಬೆಲೆ ಕುಸಿತ ಕಂಡಿದೆ.

error: Content is protected !!
Scroll to Top