ಉಪ್ಪಿನಂಗಡಿ: ಶಾಂತಿ ಭಂಗ ಪ್ರಕರಣ – ಐವರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.09. ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ಜಗಳಕ್ಕಿಳಿದಿದ್ದ ಐವರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಸಾರ್ವಜನಿಕ ಶಾಂತಿ ಭಂಗ ಪ್ರಕರಣದಡಿ ಕೇಸ್ ದಾಖಲಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ನೆಲ್ಯಾಡಿಯ ಬೆಥನಿ ಕಾಲೇಜು ಬಳಿಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ಕೆ (30), ಅಶ್ವಥ್ (26), ಸ್ವರೂಪ್ ಪಟ್ಟೆ (25), ಅಖಿಲೇಶ್ (21) ಲಕ್ಷ್ಮಣ ಗೌಡ (45) ಎಂಬವರನ್ನು ವಶಕ್ಕೆ ಪಡೆದುಕೊಂಡು ಪೊಲೀಸರು 2 ಬೈಕ್ ಗಳನ್ನು 5 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

Also Read  ಅ.02ರಂದು ಗಾಂಧಿ ಜಯಂತಿ ಹಾಗೂ ವರ್ಷದ ವ್ಯಕ್ತಿ ಗೌರವ ಪ್ರಶಸ್ತಿ ಪ್ರದಾನ

error: Content is protected !!
Scroll to Top