‘ಯಾವ ಬ್ಲಾಕ್‌ ಮೇಲ್‌ ನನ್ನ ಮುಂದೆ ನಡೆಯಲ್ಲ’ – ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ. ಕೆಲಸ ಮಾಡಿದ್ರೆ ಹಣ ಬಿಡುಗಡೆ ಆಗುತ್ತೆ, ಇಲ್ಲ ಅಂದ್ರೆ ಹಣ ಇಲ್ಲ. ಯಾವ ಬ್ಲಾಕ್‌ ಮೇಲ್‌ ನನ್ನ ಮುಂದೆ ನಡೆಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.


ಕಂಟ್ರ್ಯಾಕ್ಟರ್‌ಗಳು ಆಣೆ ಪ್ರಮಾಣಕ್ಕೆ ಬರಲಿ ಎಂದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಯಾವ ಗುತ್ತಿಗೆದಾರನಿಗೂ ಉತ್ತರ ಕೊಡಲ್ಲ. ಯಾವ ಬಿಲ್ ವಿಚಾರವೂ ಗೊತ್ತಿಲ್ಲ. ನನಗೂ ಪ್ರಜ್ಞೆ ಇದೆ, ರಾಜಕಾರಣ ಗೊತ್ತಿದೆ. ಯಾವ ಕಂಟ್ರ್ಯಾಕ್ಟರ್‌ ಹಿಂದೆ ಯಾರಿದ್ದಾರೆ ನನಗೂ ಗೊತ್ತಿದೆ. ಯಾವ ಬ್ಲಾಕ್‌ ಮೇಲ್‌ ನನ್ನ ಮುಂದೆ ನಡೆಯಲ್ಲ ಎಂದರು. ನಾನು ಯಾರಿಗೂ ಪ್ರಮಾಣ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

Also Read  ಮಂಗಳೂರು - ಬೆಂಗಳೂರು ನಡುವಿನ ರೈಲು ಸಂಚಾರ ಆ.8ರವರೆಗೆ ರದ್ದು

error: Content is protected !!
Scroll to Top