ಕಡಬ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ..!! – ಇಬ್ಬರು ಯುವಕರ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ)newskadaba.com ಕಡಬ, ಆ.09. ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಮಾಡುತ್ತಿದ್ದ  ಕುಂತೂರಿನ ಇಬ್ಬರು ಯುವಕರ ವಿರುದ್ಧ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಯುವಕರನ್ನು ಜುನೈದ್(23ವ.) ಹಾಗೂ ನಿತಿನ್(24ವ.) ಎಂದು ಗುರುತಿಸಲಾಗಿದೆ. ಯುವಕರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರಿಬ್ಬರು ಕುಂತೂರು ಮಸೀದಿಯ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಒಬ್ಬರಿಗೊಬ್ಬರು ಕೈ ಮಿಲಾಯಿಸಿಕೊಂಡು ಸಾರ್ವಜನಿಕರಿಗೆ ಭಯ ಉಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದನ್ನು ರೌಂಡ್ಸ್ ಕರ್ತವ್ಯದಲ್ಲಿದ್ದ ಕಡಬ ಠಾಣೆ ಎಸ್.ಐ.ಅವರು ಗಮನಿಸಿದ್ದು, ಜೀಪು ನಿಲ್ಲಿಸಿ ವಿಚಾರಿಸುತ್ತಿರುವಾಗಲೇ ಅವರಿಬ್ಬರು ಮತ್ತೆ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಹೊಡೆದಾಟ, ತಲ್ಲಾಟಕ್ಕೆ ಮುಂದಾಗಿದ್ದರು. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಪ್ರತಿಷ್ಠೆಯಿಂದ ಹೊಡೆದಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಹೊಡೆದಾಟ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧವೂ ಕಡಬ ಪೊಲೀಸರು ಕಲಂ: 160 ಐಪಿಸಿ-1860ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮೈಸೂರಿನ ಅರಮನೆ ಆವರಣದಲ್ಲಿರುವ ತ್ರಿನೇಶ್ವರನಿಗೆ 11 ಕೆಜಿ ತೂಕದ ಚಿನ್ನದ ಮುಖವಾಡ

 

error: Content is protected !!
Scroll to Top