ಅಕ್ರಮ ಗೋ-ಸಾಗಾಟ – ನಾಲ್ವರ ಬಂಧನ..!

(ನ್ಯೂಸ್ ಕಡಬ)newskadaba.com ಕಾರ್ಕಳ, ಆ.09. ಅಕ್ರಮ ಗೋ-ಸಾಗಾಟ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಗುರುತಿಸಲಾಗಿದೆ.


ಸ್ಕಾರ್ಫಿಯೋ ವಾಹನದಲ್ಲಿ ಆರೋಪಿಗಳು ಗೋವುಗಳನ್ನು ಸಾಗಾಟ ನಡೆಸುತ್ತಿದ್ದರು. ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯನ್ವಯ ಪೊಲೀಸರು ವಾಹನವನ್ನು ಬೆನ್ನಟ್ಟಿದ್ದು, ಬಜಗೋಳಿ ಬಳಿಯಲ್ಲಿ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಬಂಟ್ವಾಳ ಫರಂಗಿಪೇಟೆ ನಿವಾಸಿಗಳಾದ ಜಬ್ಬರ್(24), ಹೈದರಾಲಿ(26), ಕಾರ್ಕಳ ಶಿರ್ಲಾಲು ಗ್ರಾಮದ ಪ್ರಸಾದ್ ಪೂಜಾರಿ(23) ಮತ್ತು ಜಗನ್ನಾಥ ಶೆಟ್ಟಿ (58) ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ಕರಾವಳಿ ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ➤ ಜಿಲ್ಲಾಧಿಕಾರಿ ಎಸ್.ಸಸಿಕಾಂತ್ ಸೆಂಥಿಲ್

error: Content is protected !!
Scroll to Top