ಮಲ್ಲೇಶ್ವರಂ ನಿವಾಸದಲ್ಲಿ ಸ್ಪಂದನಾ ರಾಘವೇಂದ್ರ ಅಂತಿಮ ದರ್ಶನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಕಳೆದರಡು ದಿನದ ಹಿಂದೆ ಥಾಯ್ಲೆಂಡ್‌ ನಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಸ್ಯಾಂಡಲ್ ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥೀವ ಶರೀರ ತಡರಾತ್ರಿ ರಾತ್ರಿ ಬೆಂಗಳೂರಿಗೆ ತರಲಾಗಿದೆ ಎನ್ನಲಾಗಿದೆ.


ಸ್ಪಂದನಾ ತವರು ಮನೆಯಾದ ಬಿ.ಕೆ ಶಿವರಾಮ್ ಅವರ ನಿವಾಸದಲ್ಲಿ ಸ್ಪಂದನಾ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸ್ಪಂದನಾ ಅವರ ಅಂತಿಮ ದರ್ಶನ ಪಡೆಯಲು ಕುಟುಂಬದ ಆಪ್ತರು, ಚಿತ್ರರಂಗ, ರಾಜಕೀಯ ವಲಯದ ಗಣ್ಯರು ಹಾಗೂ ಅಭಿಮಾನಿಗಳು ಆಗಮಿಸುತ್ತಿದ್ದಾರೆ.

Also Read  ಕೊಡಗಿನ ಯುವಕ ಬೆಂಗಳೂರಿನಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ


ಮಧ್ಯಾಹ್ನದ ಬಳಿಕ ಹರಿಶ್ಚಂದ್ರ ಘಾಟ್‌ ನಲ್ಲಿ ಸ್ಪಂದನಾ ಅವರ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ವರದಿ ತಿಳಿಸಿದೆ. ಪಾರ್ಥೀವ ಶರೀರ ಅಂತಿಮ ದರ್ಶನ ಪಡೆಯಲು ಎರಡು ಗೇಟ್‌ ಗಳನ್ನು ನಿರ್ಮಿಸಲಾಗಿದೆ.

error: Content is protected !!
Scroll to Top