ಯುವತಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ

(ನ್ಯೂಸ್ ಕಡಬ) newskadaba.com ರಾಂಚಿ, ಆ. 08. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಯುವತಿಯೊರ್ವಳನ್ನು ಅಪಹರಿಸಿದ ನಾಲ್ವರು ಕಾಮುಕರು ಬಲವಂತವಾಗಿ ಹತ್ತಿಸಿಕೊಂಡು ಚಲಿಸುತ್ತಿದ್ದ ಟ್ರಕ್‍ ನಲ್ಲೇ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಜಾರ್ಖಂಡ್‍ನ ಗುಮ್ಲಾದ ಸದರ್ ಪೊಲೀಸ್ ಠಾಣೆಯ ಬೈಪಾಸ್‍ನಲ್ಲಿ ವಾಹನದಿಂದಿಳಿಸಿ ಪರಾರಿಯಾದ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

ಘಟನೆಯಿಂದ ಯುವತಿಯು ಭಯಭೀತಳಾಗಿದ್ದು, ಮೈಮೇಲೆ ಹಲವು ಗಾಯಗಳ ಗುರುತುಗಳಿವೆ. ಆಕೆ ಒರಿಯಾ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂತ್ರಸ್ತೆಯನ್ನು ವಿಚಾರಣೆ ಮಾಡಿ, ವೈದ್ಯಕೀಯ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

Also Read  21 ನೇ ವಯಸ್ಸಿಗೆ ಐಎಫ್‌ಎಸ್ ಅಧಿಕಾರಿಯಾದ ವಿದುಷಿ ಸಿಂಗ್

ಒಡಿಶಾ ಮೂಲದವರಾದ ಸಂತ್ರಸ್ತೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎಂದಿನಂತೆ ರಾತ್ರಿ 8.30ರ ಸುಮಾರಿಗೆ ಅಂಗಡಿಯಿಂದ ಮನೆಗೆ ಮರಳುತ್ತಿದ್ದ ವೇಳೆ ಬಲವಂತವಾಗಿ ಆಕೆಯನ್ನು ಟ್ರಕ್‍ಗೆ ಹತ್ತಿಸಿಕೊಂಡ ಕಾಮುಕರು ಚಲಿಸುವ ವಾಹನದಲ್ಲೇ ಆಕೆಯನ್ನು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top