ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ► ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂತು ಜನಸಾಗರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.04. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ರಾಜ್ಯದ ನಾನಾ ಭಾಗಗಳಿಂದ ಜನಸಾಗರವೇ ಹರಿದುಬಂದಿದೆ.

ಆ ಮೂಲಕ ಉದ್ಘಾಟನಾ ಸಮಾರಂಭದಲ್ಲಿ ಜನರಿಲ್ಲದೆ ಖಾಲಿ ಕುರ್ಚಿಯಿಂದ ಮುಜುಗರಕ್ಕೆ ಸಿಲುಕಿದ್ದ ಬಿಜೆಪಿ ಇಂದು ಭರ್ಜರಿ ಶಕ್ತಿ ಪ್ರದರ್ಶಿಸುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಸಂತೋಷ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಕೆಲವು ಸಣ್ಣಪುಟ್ಟ ಲೋಪದೋಷಗಳನ್ನು ಹೊರತುಪಡಿಸಿದರೆ ಕಾರ್ಯಕ್ರಮ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. ಇಂದಿನ ಸಮಾರೋಪಕ್ಕೆ ಖುದ್ದು ಪ್ರಧಾನಿಯ ಆಗಮನದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ಬೆಂಗಳೂರಿನ ಅರಮನೆ ಮೈದಾನಕ್ಕೆ ರಾಜ್ಯದ ನಾನಾ ಭಾಗಗಳಿಂದ ಕಾರ್ಯಕರ್ತರ ದಂಡೇ ಹರಿದುಬಂದಿತ್ತು.
ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಕಾರವಾರ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಯಾದಗಿರಿ, ವಿಜಯಪುರ, ಕಲಬುರಗಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಕಾರ್ಯಕರ್ತರು ಆಗಮಿಸಿದ್ದಾರೆ.

Also Read  ಚನ್ನಪಟ್ಟಣ 'ಉಪ ಚುನಾವಣೆಗೆ ನಾನೇ ಅಭ್ಯರ್ಥಿ'              ಡಿಸಿಎಂ ಡಿಕೆ ಶಿವಕುಮಾರ್              

ಟಿವಿ ಟವರ್, ಮೇಕ್ರಿವೃತ್ತ, ಕಾವೇರಿ ಜಂಕ್ಷನ್, ಹೆಬ್ಬಾಳ ಫ್ಲೈಓವರ್ ಮೂಲಕ ಆಗಮಿಸಿದ್ದ ವಾಹನಗಳನ್ನು ಅರಮನೆ ಮೈದಾನದ ಹಳೆಮಾವಿನಕಾಯಿ ಮಂಡಿ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಉಳಿದಂತೆ ಕಾರ್ಯಕರ್ತರಿಗೆ ಬೆಳಗಿನ ಉಪಹಾರಕ್ಕೆ ಚೌಚೌಬಾತ್, ಪಲಾವ್ ಹಾಗೂ ಮಧ್ಯಾಹ್ನದ ಊಟಕ್ಕೆ ಮೊಸರನ್ನ, ಚಿತ್ರಾನ್ನ , ಪುಳಿಯೊಗರೆ ನೀಡಲಾಯಿತು.

Also Read  ಇನ್ಮುಂದೆ ವಾರದಲ್ಲಿ 2 ದಿನ ಮಾತ್ರ ಡ್ರಿಂಕ್ & ಡ್ರೈವ್ ತಪಾಸಣೆ - ಪೊಲೀಸ್ ಇಲಾಖೆಯಿಂದ ಹೊಸಕ್ರಮ

error: Content is protected !!
Scroll to Top