ಪತ್ನಿ ಕೊಟ್ಟ ಕಾಫಿಯಲ್ಲಿ ಕೆಟ್ಟ ವಾಸನೆ – ಸಿಸಿಟಿವಿ ನೋಡಿದ ಗಂಡನಿಗೆ ಕಾದಿತ್ತು ಶಾಕ್..!

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್​, ಆ. 08. ವಿಷ ಬೆರೆಸಿದ ಕಾಫಿಯನ್ನು ಕುಡಿಯಲು ಕೊಟ್ಟು ಪತಿಯನ್ನು ಕೊಲೆ ಮಾಡಲು ಯತ್ನಿಸಿದ ಪತ್ನಿಯನ್ನು ಗಂಡ ರೆಡ್​ ಹ್ಯಾಂಡ್​ ಆಗಿ ಹಿಡಿದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

ಯುಎಸ್​ ಏರ್​ಪೋರ್ಸ್​ ಉದ್ಯೋಗಿಯಾಗಿರುವ ಪತಿ ಜಾನ್ಸನ್​ ಎಂಬವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದಡಿ ಮೆಲೊಡಿ ಫೆಲಿಕ್ಯಾನೋ ಎಂಬಾಕೆಯನ್ನು ಯುಎಸ್​ ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಕುಡಿಯಲು ಕೊಟ್ಟ ಕಾಫಿಯಿಂದ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ್ದರಿಂದ ಭಾರೀ ದುರಂತ ತಪ್ಪಿದಂತಾಗಿದೆ. ವರದಿಯ ಪ್ರಕಾರ ಕಳೆದ ಮಾರ್ಚ್​ನಿಂದಲೂ ಕಾಫಿಯಲ್ಲಿ ಸ್ಲೋ ಪಾಯಿಸನ್​ ಹಾಕಲು ಪತ್ನಿ ಆರಂಭಿಸಿದ್ದಳು. ಆಕೆಯ ವರ್ತನೆಯ ಮೇಲೆ ಅನುಮಾನಗೊಂಡ ಪತಿ ಜಾನ್ಸನ್,​ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ. ಇತ್ತೀಚೆಗೆ ಕಾಫಿಯಲ್ಲಿ ಕೆಟ್ಟ ವಾಸನೆ ಬರುವುದನ್ನು ಗಮನಿಸಿದ ಜಾನ್ಸನ್​, ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ಈ ವೇಳೆ ಕಾಫಿಗೆ ವಿಷ ಬೆರೆಸುತ್ತಿರುವುದು ಜಾನ್ಸನ್​ ಗಮನಕ್ಕೆ ಬಂದಿದೆ. ಪತಿ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರಿಗೆ ತೋರಿಸಿದಾಗ ತನಿಖೆ ನಡೆಸಿದ ಪೊಲೀಸರು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

Also Read  ಚಿಕಾಗೋದಲ್ಲಿ ಮಂಗಳೂರಿನ ಕೊಂಕಣ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ 22 ನೇ ವಾರ್ಷಿಕ ಮೋಂತಿ ಫೆಸ್ಟ್ ಆಚರಣೆ

error: Content is protected !!
Scroll to Top