ರೈಲಿನಲ್ಲಿ ಮಹಿಳೆಯ ಬ್ಯಾಗ್ ಕಳವು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 08. ಮಂಗಳೂರಿನಿಂದ ಮುಂಬಯಿಗೆ ಚಲಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗನ್ನು ಎಗರಿಸಿ ಅದರಲ್ಲಿದ್ದ ಹಣ ಮತ್ತು ದಾಖಲೆಪತ್ರಗಳನ್ನು ಕಳವುಗೈದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲತಃ ಮುಂಬಯಿ ನಿವಾಸಿ ಪ್ರಸ್ತುತ ಮಂಗಳೂರಿನ ಶಕ್ತಿನಗರದಲ್ಲಿ ವಾಸವಾಗಿದ್ದ ಎಲಿಜಬೆತ್‌ ಎಂಬವರಿಗೆ ಸೇರಿದ ಬ್ಯಾಗ್‌ ಇದಾಗಿದ್ದು, ಇದರಲ್ಲಿ ಸುಮಾರು 15 ಸಾವಿರ ರೂ., ಎಟಿಎಂ, ಆಧಾರ್‌ ಮತ್ತು ಪಾನ್‌ ಕಾರ್ಡ್‌ ಮತ್ತಿತರ ದಾಖಲೆಗಳಿದ್ದವು. ಆರೋಪಿಗಳು ಅವೆಲ್ಲವನ್ನು ತೆಗೆದು ಬ್ಯಾಗ್‌ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಂಕನಾಡಿಯಲ್ಲಿರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಮುಂಬಯಿಗೆ ತೆರಳುವ ರೈಲಿಗೆ ಆ. 04ರಂದು ಸಂಜೆ 5.30ಕ್ಕೆ ಎಲಿಜೆಬೆತ್‌ ಮತ್ತವರ ಸಹೋದರರು ಹತ್ತಿದ್ದರು. ರಾತ್ರಿ ಸುಮಾರು 10ಕ್ಕೆ ಇಬ್ಬರು ನಿದ್ದೆಗೆ ಜಾರಿದ್ದು, ಬೆಳಗ್ಗೆ ಎದ್ದು ನೋಡಿದಾಗ ಬ್ಯಾಗ್‌ ಕಳವಾಗಿತ್ತು. ಹುಡುಕಾಡಿದಾಗ ಬ್ಯಾಗ್‌ ರೈಲಿನ ಬೋಗಿಯೊಂದರ ಟಾಯ್ಲೆಟ್‌ನಲ್ಲಿ ಕಂಡುಬಂದಿತ್ತು. ಈ ಕುರಿತು ಮಹಿಳೆ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ.

Also Read  ಸುಳ್ಯ: ಕಾರು ಹಾಗೂ ಲಾರಿ ನಡುವೆ ಅಪಘಾತ- ಓರ್ವನಿಗೆ ಗಾಯ

error: Content is protected !!
Scroll to Top