ಬಾಲಕಿ ಎದುರೇ ಹಸ್ತಮೈಥುನ- ವ್ಯಕ್ತಿಗೆ 3 ವರ್ಷ ಕಠಿಣ ಶಿಕ್ಷೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 08. ಬಾಲಕಿ ಎದುರೇ ಸಾರ್ವಜನಿಕವಾಗಿ ಹಸ್ತಮೈಥುನ ಮಾಡಿಕೊಂಡಿದ್ದ ಆರೋಪದಡಿ ವ್ಯಕ್ತಿಯೋರ್ವರಿಗೆ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ನಗರದ 1ನೇ ತ್ವರಿತ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

2020ರಲ್ಲಿ ಆರೋಪಿ ಬಾಲಕಿ ಎದುರೇ ಹಸ್ತಮೈಥುನ ಮಾಡಿಕೊಂಡಿರುವ ಕುರಿತು ಭಾರತೀ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ, ಆರೋಪಿಯನ್ನು ಲೈಂಗಿಕ ಕಿರುಕುಳದ ಅಪರಾಧಿ ಎಂದು ಘೋಷಿಸಿ ಮತ್ತು ಆತನಿಗೆ 20,000 ರೂ. ದಂಡ ವಿಧಿಸಿದ್ದಾರೆ.


13 ವರ್ಷದ ಬಾಲಕಿ ಬೆಂಗಳೂರಿನಲ್ಲಿ 2020ರ ಫೆಬ್ರವರಿಯಲ್ಲಿ ತನ್ನ ಸಾಕುನಾಯಿಯನ್ನು ಕರೆದುಕೊಂಡು ವಾಕಿಂಗ್ ಮಾಡುತ್ತಿದ್ದ ವೇಳೆ, ಬಾಲಕಿ ಎದುರೇ ರಹಮತ್ ಉಲ್ಲಾ ಹಸ್ತಮೈಥುನ ಮಾಡಿಕೊಂಡಿದ್ದ. ಇದರಿಂದ ಹೆದರಿದ ಬಾಲಕಿ ಮನೆಗೆ ಹಿಂತಿರುಗಲು ಮುಂದಾದಾಗ, ಆಕೆಯನ್ನು ಆತ ಹಿಂಬಾಲಿಸಿದ್ದ ಆತ ಅಸಭ್ಯವಾಗಿ ವರ್ತಿಸಿದ್ದ. ಬಾಲಕಿ ತಂದೆ ಅದೇ ದಿನ ಪೊಲೀಸರಿಗೆ ದೂರು ದಾಖಲಿಸಿದ್ದರು. ಆರೋಪಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಅದಾದ ಕೆಲವು ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯನ್ನು ಗುರುತಿಸಲಾಗಿದ್ದು, ವಿಚಾರಣೆಯಲ್ಲಿ ಆತನ ವಿರುದ್ಧ ಸಾಕ್ಷ್ಯವಾಗಿ ಬಳಸಲಾಗಿದೆ.

Also Read  ಹೆಂಡತಿಗಾಗಿ ತೆಂಗಿನ ಮರವೇರಿ ಕುಳಿತ ಗಂಡ.!

error: Content is protected !!
Scroll to Top