ಮುಸುಕುಧಾರಿಗಳಿಂದ ಬಾಲಕನಿಗೆ ಇಂಜೆಕ್ಷನ್ – ಪೋಷಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಮುದ್ದೇಬಿಹಾಳ, . 08. ಶಾಲೆಗೆ ತೆರಳುತ್ತಿದ್ದ 12 ವರ್ಷದ ಬಾಲಕನಿಗೆ ಮುಸುಕುಧಾರಿಗಳಿಬ್ಬರು ಇಂಜೆಕ್ಷನ್ ಚುಚ್ಚಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಇಂಜೆಕ್ಷನ್ ಚುಚ್ಚಿರುವ ಕುರಿತು ಶಾಲೆ ಬಿಟ್ಟು ಮನೆಗೆ ಮರಳಿದ ಬಾಲಕ ತಕ್ಷಣ ಮನೆಯವರಿಗೆ ತಿಳಿಸಿದ್ದಾನೆ. ತಕ್ಷಣ ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಖಾಸಗಿ ಆಸ್ಪತ್ರೆಯವರು ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದಾರೆ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎಂಎಲ್ಸಿ ಪ್ರಕರಣದಡಿ ಹೆಸರು ನೋಂದಾಯಿಸಿಕೊಂಡ ವೈದ್ಯರು ಪರಿಶೀಲಿಸಿ, ಬಾಲಕ ಹೇಳುವ ಜಾಗದಲ್ಲಿ ಚುಚ್ಚಿದ ಗುರುತು ಇದೆ. ಆದರೆ ಅದು ಇಂಜೆಕ್ಷನ್ ಅಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಗಾಬರಿಗೊಂಡ ಪಾಲಕರು ಪೊಲೀಸ್ ಠಾಣೆಗೆ ಆಗಮಿಸಿದ್ದು, ಪೊಲೀಸರು ಬಾಲಕ ಮತ್ತು ಪಾಲಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Also Read  ಲಂಚ ಪಡೆಯುತ್ತಿದ್ದ ಭೂಮಾಪಕ ಅಧಿಕಾರಿ ಎಸಿಬಿ ಬಲೆಗೆ

error: Content is protected !!
Scroll to Top