ಕೆಎಸ್ಸಾರ್ಟಿಸಿ ಯಿಂದ ವಿವಿಧೆಡೆ ಟೂರ್ ಪ್ಯಾಕೇಜ್…. ದರ ಮಾಹಿತಿ ಇಲ್ಲಿದೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 08. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ವಾರಾಂತ್ಯದಲ್ಲಿ ರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದ್ದು, ಇದರ ವಿವರ ಇಂತಿದೆ.


ಜೋಗ ಜಲಪಾತ ಪ್ರವಾಸ: ಬೆಂಗಳೂರಿನಿಂದ ಶುಕ್ರವಾರದಂದು ರಾತ್ರಿ 9:30ಕ್ಕೆ ಹೊರಟು ಶನಿವಾರ ಬೆಳಿಗ್ಗೆ 5 ಗಂಟೆಗೆ ಸಾಗರ ತಲುಪಲಿದ್ದು, ಅಲ್ಲಿ ವಿಶ್ರಾಂತಿ – ಉಪಹಾರದ ಬಳಿಕ ವರದಹಳ್ಳಿಗೆ, ವರದಾಮೂಲ ಇಕ್ಕೇರಿ ಮತ್ತು ಕೆಳದಿ ಪ್ರವಾಸಿ ತಾಣಕ್ಕೆ ಸುತ್ತಾಡಿಕೊಂಡು ಮಧ್ಯಾಹ್ನ ಊಟಕ್ಕೆ ಸಾಗರ ತಲುಪಲಿದೆ.


ಊಟದ ಬಳಿಕ ಜೋಗಕ್ಕೆ ತೆರಳಿ ಜಲಪಾತ ವೀಕ್ಷಿಸಿ, ನಂತರ ಸಂಜೆ 7ಕ್ಕೆ ಮತ್ತೆ ಸಾಗರಕ್ಕೆ ವಾಪಸ್ ಬಂದು ಶಾಪಿಂಗ್ – ಊಟ ಮುಗಿಸಿಕೊಂಡು ರಾತ್ರಿ 10 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 5 ಗಂಟೆಗೆ ಬೆಂಗಳೂರು ತಲುಪಲಿದೆ. ಮೊದಲ ಪ್ರವಾಸ ಆಗಸ್ಟ್ 11ರಿಂದ ಪ್ರಾರಂಭಗೊಳ್ಳಲಿದ್ದು, ವಯಸ್ಕರಿಗೆ 2,500 ರೂ. ಹಾಗೂ ಮಕ್ಕಳಿಗೆ 2,300 ರೂ. ಪ್ರಯಾಣ ದರ ನಿಗದಿಪಡಿಸಲಾಗಿದೆ.

Also Read  ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್..⁉️ ➤ ಗೃಹ ಸಚಿವ ಬೊಮ್ಮಾಯಿ ಹೇಳಿದ್ದು ಹೀಗೆ..‼️


ಗಗನಚುಕ್ಕಿ ಪ್ರವಾಸ: ಬೆಂಗಳೂರಿನಿಂದ ಬೆಳಗ್ಗೆ 6-30 ಕ್ಕೆ ಹೊರಟು ಮದ್ದೂರಿನಲ್ಲಿ ಉಪಹಾರ ಮುಗಿಸಿಕೊಂಡ ಬಳಿಕ ಸೋಮನಾಥಪುರ, ತಲಕಾಡು ತಲುಪಲಿದೆ. ತಲಕಾಡಿನಲ್ಲಿ ಊಟದ ವಿರಾಮವಿರಲಿದ್ದು ನಂತರ ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ವೀಕ್ಷಿಸಿ ಸಂಜೆ 6-15ಕ್ಕೆ ಹೊರಟು ರಾತ್ರಿ 9ಕ್ಕೆ ಬೆಂಗಳೂರು ತಲುಪಲಿದೆ. ಊಟ – ಉಪಹಾರ ಹೊರತುಪಡಿಸಿ ವಯಸ್ಕರಿಗೆ 450 ರೂಪಾಯಿ ಹಾಗೂ ಮಕ್ಕಳಿಗೆ 300 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 7760990287 ಅಥವಾ 7760990988 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಫೆ. 26, 27- ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ

error: Content is protected !!
Scroll to Top