ಸಂಚಾರಿ ನಿಯಮ ಉಲ್ಲಂಘನೆ – 170 ಮಂದಿಯ ಡಿ ಎಲ್ ರದ್ದು

(ನ್ಯೂಸ್ ಕಡಬ) newskadaba.com ಮಂಗಳೂರು. 08. ನಗರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ170 ಮಂದಿಯ ಲೈಸೆನ್ಸ್ನ್ನು ಆರ್.ಟಿಒ ಅಧಿಕಾರಿಗಳು ರದ್ದುಗೊಳಿಸಿರುವ ಕುರಿತು ವರದಿಯಾಗಿದೆ.

ವಾಹನ ಸವಾರರು ವಿವಿಧ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆ ಚಾಲಕರ ಅನುಜ್ಞಾ ಪತ್ರವನ್ನು ರದ್ದು ಪಡಿಸಲಾಗಿದೆ. 24 ಅಪಘಾತ ಪ್ರಕರಣಗಳು, 12 ಅತಿಯಾದ ವೇಗದ ಪ್ರಕರಣಗಳು, 11 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ವಿಚಾರ, 95 ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ನಡೆಸಿದ ಪ್ರಕರಣಗಳು, 13 ಸೀಟ್ ಬೆಲ್ಟ್ ಧರಿಸದೇ ಚಾಲನೆ, 7 ರೆಡ್ ಸಿಗ್ನಲ್ ಜಂಪ್, 5 ಚಾಲನೆ ಸಂದರ್ಭ ಮೊಬೈಲ್ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಲ್ ರದ್ದುಗೊಳಿಸಲಾಗಿದೆ. ಇನ್ನು ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ 371 ವಾಹನಗಳ ವಿರುದ್ಧ ಕೇಸ್ ದಾಖಲಾಗಿದೆ. ಕರ್ಕಶ ಹಾರ್ನ್ ಬಳಕೆ 31, ಟಿಂಟ್ ಬಳಕೆ 23 ಪ್ರಕರಣಗಳು ದಾಖಲಾಗಿದೆ.

Also Read  ಧರ್ಮಗುರುಗಳು ಸೇರಿದಂತೆ ಕಡಬದ ನಾಲ್ವರಲ್ಲಿ ಇಂದು ಕೊರೋನಾ ಸೋಂಕು

error: Content is protected !!
Scroll to Top