ಆ. 26ರಂದು ಗಡಿನಾಡ ಕನ್ನಡ ಉತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು,ಆ. 08. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗಡಿನಾಡ ಕನ್ನಡ ಉತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಜಿಲ್ಲಾ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಶ್ರೀನಾಥ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ ಮಾಹೆಯ 26ರಂದು ಗಡಿನಾಡ ಕನ್ನಡ ಉತ್ಸವ ಕಾರ್ಯಕ್ರಮ ತಲಪಾಡಿಯ ವಿಶ್ವಾಸ ಸಭಾಂಗಣದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು. ಇದೇ ವೇಳೆ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಲವು ಸಂಘಸಂಸ್ಥೆಗಳ ಪದಾಧಿಕಾರಿಗಳು, ಕವಿಗಳು ಸಾಹಿತ್ಯ ಪರಿಷತ್ತಿನ ಸದಸ್ಯರು ಊರ ನಾಗರಿಕರು ಹಾಜರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯು ಸುಬ್ಬಯ್ಯ ಕಟ್ಟೆ ಅವರ ಸ್ವಾಗತದೊಂದಿಗೆ ಆರಂಭಗೊಂಡರೆ, ಕಾಸರಗೋಡು ಸಾಹಿತ್ಯ ಪರಿಷತ್ತು ಸದಸ್ಯ ಸಮಾಜ ಸೇವಕ ಕನ್ನಡ ಹೋರಾಟಗಾರ ಕವಿ ಸಾಹಿತಿ ಜೀವಿ ಗಂಗೆನೀರು ಕಾವ್ಯನಾಮದ ಜಿ.ವೀರೇಶ್ವರ ಭಟ್ ಕರ್ಮರ್ಕರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Also Read  ಬಂಟ್ವಾಳ: ಪಾದಾಚಾರಿ ಮಹಿಳೆಗೆ ಬೈಕ್ ಢಿಕ್ಕಿ- ಮೃತ್ಯು

error: Content is protected !!
Scroll to Top