ಫಳ್ನೀರ್: ದರೋಡೆಗೆ ಸಂಚು ► ನಾಲ್ವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.04. ನಗರದ ಫಳ್ನೀರ್ ಬಳಿಯಲ್ಲಿ ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದರೆನ್ನಲಾದ ನಾಲ್ವರು ಆರೋಪಿಗಳನ್ನು ನಗರ ಅಪರಾಧ ಪತ್ತೆ ದಳ (ಸಿಸಿಬಿ) ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ತೊಕ್ಕೊಟ್ಟು ಒಳಪೇಟೆ ನಿವಾಸಿ ಮನೋಜ್ ಕುಮಾರ್ (33), ಮೊಗವೀರಪಟ್ಣ ಬೀಚ್ ಬಳಿಯ ನಿವಾಸಿ ಪ್ರಸಾದ್ ಯಾನೆ ಪಚ್ಚು (28), ಮೊಗವೀರಪಟ್ಣ ವ್ಯಾಘ್ರ ಚಾಮುಂಡೇಶ್ವರಿ ದೇವಳದ ಬಳಿಯ ನಿವಾಸಿ ಶ್ರವಣ್ (22) ಹಾಗೂ ತೊಕ್ಕೊಟ್ಟು ಭಟ್ ನಗರ ನಿವಾಸಿ ಸುಜಿತ್ (27) ಎಂದು ಗುರುತಿಸಲಾಗಿದೆ. ನಗರದ ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಫಳ್ನೀರ್ ಎಂಬಲ್ಲಿ ಟಾಟಾ ಸುಮೋ ವಾಹನವೊಂದರಲ್ಲಿ ಬಂದ 9-10 ಮಂದಿ ಯುವಕರು ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ತಲವಾರು, ಮಚ್ಚು, ಚೂರಿ, 40 ಗ್ರಾಂ ಗಾಂಜಾ ಮತ್ತು 3 ಮೊಬೈಲ್ ಫೋನ್, ಟಾಟಾ ಸುಮೋ ಕಾರು ಸೇರಿದಂತೆ ಒಟ್ಟು 1,19,000 ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

Also Read  ಬೆಳ್ಳಾರೆ: ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ

error: Content is protected !!
Scroll to Top