ಫ್ಲೈವುಡ್ ಫ್ಯಾಕ್ಟರಿಯ ಸ್ಲಾಬ್ ಕುಸಿತ- ಮೇಲ್ವಿಚಾರಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, . 07. ಫ್ಲೈವುಡ್ ಫ್ಯಾಕ್ಟರಿಯ ಸ್ಲಾಬ್ ಕುಸಿದು ಬಿದ್ದ ಪರಿಣಾಮ ಮೇಲ್ವಿಚಾರಕ ಮೃತಪಟ್ಟ ಘಟನೆ ಕುಂಬಳೆ ಸಮೀಪದ ಅನಂತಪುರದಲ್ಲಿ ಸೋಮವಾರದಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ಪಯ್ಯನ್ನೂರ್ ಕೇಲೊತ್ ನ ರೌಪ್ (60) ಎಮದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಈ ಫ್ಯಾಕ್ಟರಿಯ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಅದರಂತೆ ನಿರ್ಮಿಸಲಾದ ಸ್ಲಾಬ್ ಕುಸಿದು ಬಿದ್ದು ಈ ದುರ್ಘಟನೆ ನಡೆದಿದೆ. ಸ್ಲಾಬ್ ಅಡಿಗೆ ಬಿದ್ದ ರೌಫ್ ರವರನ್ನು ಹೊರತೆಗೆದು ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು. ಸ್ಥಳಕ್ಕೆ ಕುಂಬಳೆ ಪೊಲೀಸರು ಆಗಮಿಸಿ ತನಿಖೆ ಆರಂಭಿಸಿದ್ದಾರೆ.

Also Read  ವಿದ್ಯುತ್ ಕಂಬಕ್ಕೆ ಆಟೋ ರಿಕ್ಷಾ ಢಿಕ್ಕಿ - ಯುವತಿ ಮೃತ್ಯು

error: Content is protected !!
Scroll to Top