ಕಾಫಿ ತೋಟದಲ್ಲಿ ಗಾಂಜಾ ಬೆಳೆ- ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಸಿದ್ದಾಪುರ, . 07.  ವ್ಯಕ್ತಿಯೋರ್ವ ತನ್ನ ಮನೆಯ ಹಿಂಭಾಗದ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಸಿದ್ದಾಪುರ ಸಮೀಪದ ಗುಡ್ಲೂರು ಚನ್ನಮಗಿ ನಿವಾಸಿ ಕೆ.ಆರ. ಕಿರಣ್ ಅಲಿಯಾಸ್ ಐರಿ ಕಿರಣ್ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಮನೆಯ ಹಿಂಭಾಗದಲ್ಲಿನ ಕಾಫಿ ತೋಟದಲ್ಲಿ ಅಕ್ರಮವಾಘಿ ಗಾಂಜಾ  ಬೆಳೆಸಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಪೊಲೀಸರು ದಾಳಿ ನಡೆಸಿ, ಗಾಂಜಾ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Also Read  ಮಾರುಕಟ್ಟೆ ಮೌಲ್ಯ ದರಪಟ್ಟಿ ಪರಿಷ್ಕರಣೆ

error: Content is protected !!
Scroll to Top