ಸೌಜನ್ಯ ಪ್ರಕರಣದ ರಹಸ್ಯಗಳನ್ನ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು – ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 07. ಧರ್ಮಸ್ಥಳದ ಸೌಜನ್ಯ ಹತ್ಯೆ ಬಗ್ಗೆ ಮಾತನಾಡಿದ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ‘ಸಿಬಿಐ ತನಿಖೆಯ ದಾರಿ ತಪ್ಪಿಸಲಾಗಿತ್ತು. ಪ್ರಕರಣದ ರಹಸ್ಯವನ್ನ ಬಿಚ್ಚಿಟ್ಟರೆ ನನ್ನನ್ನೂ ಸಾಯಿಸಬಹುದು’ ಎಂಬ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.


ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಖಾಕಿಯಾಗಲೀ, ಕಾವಿಯಾಗಲೀ ಅವರನ್ನೂ ತನಿಖೆ ಮಾಡುವ ಶಕ್ತಿ ನಮ್ಮಲ್ಲಿ ಇದೆ. ಸಮಯ ಬಂದಾಗ ಮಾತನಾಡುತ್ತೇನೆ. ಆಗ ನನ್ನನ್ನೂ ಸಾಯಿಸಿಬಿಡಬಹುದು. ಆದರೆ ಸಾಯುವ ಮೊದಲು ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

Also Read  'ಶಾಸಕರ ವಿರುದ್ಧ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ'   ಸಚಿವ ವಿನಯ್ ಕುಮಾರ್ ಸೊರಕೆ                    

 

error: Content is protected !!
Scroll to Top