ಆನ್‌ಲೈನ್ ಮಾರ್ಕೆಟಿಂಗ್ ಮೂಲಕವೇ ಬದುಕು ಕಟ್ಟಿಕೊಂಡ ಯುವ ಕೃಷಿಕರು

(ನ್ಯೂಸ್ ಕಡಬ)newskadaba.com ರಾಮನಗರ, ಆ.07. ಮಹಾಮಾರಿ ಕೊರೋನಾ ಲಾಕ್‌ ಡೌನ್ ಸಮಯದಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕುಸಿತ ಹಾಗೂ ಮಾರುಕಟ್ಟೆ ಸಮಸ್ಯೆಯಿಂದ ಬಳಲಿ ನಷ್ಟಕ್ಕೀಡಾದ ರೈತರೇ ಹೆಚ್ಚು. ಆದರೆ, ಇದನ್ನು ಸವಾಲಾಗಿ ಸ್ವೀಕರಿಸಿದ ಯುವ ರೈತರೊಬ್ಬರು ಆನ್‌ಲೈನ್ ಮಾರ್ಕೆಟಿಂಗ್ ಮೂಲಕ ತಾನು ಬೆಳೆದ ಉತ್ಪನ್ನಗಳನ್ನೇ ಮಾರುವುದನ್ನು ಮುಂದುವರಿಸಿ ಮಾದರಿಯಾಗಿ ನಿಂತಿದ್ದಾರೆ.

ನಂಜುಂಡಸ್ವಾಮಿ 2015ರಲ್ಲಿ ಬೆಂಗಳೂರಿನ ಬದುಕು ಕಮ್ಯೂನಿಟಿ ಕಾಲೇಜಿನಲ್ಲಿ  6 ತಿಂಗಳ ಕಾಲ ಸುಸ್ಥಿರ ಕೃಷಿ ಅಧ್ಯಯನ ವಿಷಯದಲ್ಲಿ ತರಬೇತಿ ಪಡೆದು, ಬೆಂಗಳೂರಿನಲ್ಲಿಯೇ ಅರೆ ಕೃಷಿಕನಾಗಿ ಹಾಗೂ ಅರೆಕಾಲಿಕ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದವರು. ನಂತರ ಸಾವಯವ ಕೃಷಿ ಮಾಡುವ ಕನಸಿನೊಂದಿಗೆ ಅರಳುಕುಪ್ಪೆಯಲ್ಲಿರುವ ಸ್ವಂತ 3 ಎಕರೆಯಲ್ಲಿ ಸಿರಿಧಾನ್ಯಗಳನ್ನು ಬೆಳೆದರು. ಆದರೆ, ಕೋವಿಡ್ ಕಾಲದಲ್ಲಿ ಹೊಲ, ಗದ್ದೆ ಹಾಗೂ ತೋಟದ ಬೆಳೆಯನ್ನು ಖರೀದಿಸುವವರು ಇಲ್ಲದೆ, ಮಾರುಕಟ್ಟೆಗೂ ಸಾಗಿಸಲಾಗದೇ ಎಲ್ಲ ರೈತರಂತೆ ನಂಜುಂಡಸ್ವಾಮಿ ಕೂಡ ಕೈಚೆಲ್ಲಿ ಕುಳಿತು ಸಂಕಷ್ಟಕ್ಕೆ ಸಿಲುಕಿದರು. ಹೇಗಾದರೂ ಮಾಡಿ ಗ್ರಾಹಕರಿಗೆ ಕೃಷಿ ಉತ್ಪನ್ನಗಳನ್ನು ತಲುಪಿಸಲೇ ಬೇಕೆಂಬ ನಿರ್ಧಾರಕ್ಕೆ ಬಂದ ನಂಜುಂಡಸ್ವಾಮಿರವರು -ಫೇಸ್ ಬುಕ್ ಹಾಗೂ ವಾಟ್ಸ್ ಆ್ಯಪ್ ಮೊರೆ ಹೋದರು ಎನ್ನಲಾಗಿದೆ.

 

error: Content is protected !!

Join the Group

Join WhatsApp Group