ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ..! – ಓರ್ವ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಆ.07. ರಬ್ಬರ್ ಟ್ಯಾಪಿಂಗ್ ಕಾರ್ಮಿಕರ ನಡುವೆ ಜಗಳ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಉಪ್ಪಿನಂಗಡಿ ಪೆರಿಯಡ್ಕದ ನೆಡ್ಚಿಲ್ ಬಳಿ ನಡೆದಿದೆ.

ಕೇರಳ ಮೂಲದ ಮೂವರು ಇಲ್ಲಿ ಬಾಡಿಗೆ ರೂಂನಲ್ಲಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ನಡೆಸುತ್ತಿದ್ದರು. ಇವರು ತಮ್ಮ ಬಾಡಿಗೆ ಕೊಠಡಿಯಲ್ಲಿ ಪರಸ್ಪರ ಜಗಳವಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರು ಸೇರಿ ಮರದ ತುಂಡಿನಿಂದ ಮತ್ತೋರ್ವನ ತಲೆಗೆ ಹೊಡೆದಿದ್ದಲ್ಲದೆ, ತೀವ್ರ ಗಾಯಗೊಂಡು ಬಿದ್ದಿದ್ದ ಈತನನ್ನು ಕೊಠಡಿಯ ಹೊರಗೆ ಹಾಕಿ, ಬಾಗಿಲು ಹಾಕಿ ಕುಳಿತ್ತಿದ್ದರು ಎನ್ನಲಾಗಿದೆ.

Also Read  ಚಲಿಸುತ್ತಿರುವ ಸಾರಿಗೆ ಬಸ್ ಗಳ ಬಾಗಿಲು ಮುಚ್ಚುವುದು ಕಡ್ಡಾಯ ನ.6ರಿಂದಲೇ ಜಾರಿಗೊಳಿಸಲು ಡಿಸಿ ಮುಲ್ಲೈ ಮುಗಿಲನ್ ಆದೇಶ

ಸ್ಥಳೀಯರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈತನ ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಬಂದು ಹಲ್ಲೆ ನಡೆಸಿದ ಇಬ್ಬರನ್ನು ಕರೆದೊಯ್ದಿದ್ದಾರೆ.

 

error: Content is protected !!
Scroll to Top