ಭಯೋತ್ಪಾದಕನ ಹತ್ಯೆಗೈದ ಭಾರತೀಯ ಸೇನೆ

(ನ್ಯೂಸ್ ಕಡಬ) newskadaba.com ಕಾಶ್ಮೀರ, . 07. ಭಾರತದ ಗಡಿ ನಿಯಂತ್ರಣ ರೇಖೆಯಲ್ಲಿ ಒಳನುಸುಳಲು ಪ್ರಯತ್ನಿಸಿದ ಓರ್ವ ಭಯೋತ್ಪಾದಕನನ್ನು ಭಾರತೀಯ ಸೇನೆ ಹೊಡೆದುರುಳಿಸಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆತಿಂದ ವರದಿಯಾಗಿದೆ.

ಭಯೋತ್ಪಾದಕರು ಜಿಲ್ಲೆಯ ದೆಗ್ವಾರ್ ಸೆಕ್ಟರ್‌ ನಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ವೇಳೆ ಗಡಿ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಸೇನಾ ಪಡೆ ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿ ಮುನ್ನುಗ್ಗಿದ ನುಸುಳುಕೋರನನ್ನು ಸೇನಾಪಡೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದೆನ್ನಲಾಗಿದೆ. ಸೇನೆ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗಡಿ ರೇಖೆಯೊಳಗೆ ನುಸುಳುತ್ತಿದ್ದ ಇಬ್ಬರು ಭಯೋತ್ಪಾದಕರು ಮೇಲೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಮೃತಪಟ್ಟರೆ ಇನ್ನೋರ್ವನಿಗೆ ಗುಂಡೇಟು ತಗುಲಿದ್ದು ಆತನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

Also Read  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿ ➤ ಪ್ರಧಾನಿ ಮೋದಿ ಸ್ಮರಣೆ

error: Content is protected !!
Scroll to Top