ಬ್ರಿಟನ್‌ ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ರೂಪಾಂತರಿ..!

(ನ್ಯೂಸ್ ಕಡಬ)newskadaba.com ಬ್ರಿಟನ್, ಆ.05. ಬ್ರಿಟನ್‌ ನಲ್ಲಿ ಕೊರೊನಾ ಹೊಸ ರೂಪಾಂತರ ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದ್ದು, ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ಪ್ರಕಾರ, ಇಲ್ಲಿ ಪ್ರತಿ 7 ರೋಗಿಗಳಲ್ಲಿ ಒಬ್ಬರು ಈ ಹೊಸ ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ.

ಇದು EG.5.1 ಎಂದು ಹೆಸರಿಸಲಾದ ಒಮಿಕ್ರಾನ್ ನಿಂದ ಪಡೆದ ರೂಪಾಂತರಿಯಾಗಿದೆ. ಏಜೆನ್ಸಿಯ ಪ್ರಕಾರ, ಈ ಹೊಸ ರೂಪಾಂತರದ ಹೆಚ್ಚಿನ ಪ್ರಕರಣಗಳು ಏಷ್ಯಾದಲ್ಲಿ ಕಂಡುಬರುತ್ತಿವೆ. ಇದು ಇಲ್ಲಿವರೆಗೆ ಕಾಣಿಸಿರುವ ಕೊರೊನಾದ 2ನೇ ಅತ್ಯಂತ ಅಪಾಯಕಾರಿ ರೂಪಾಂತರಿಯಾಗಿದೆ ಎಂದು ವರದಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಕೇವಲ ಎರಡು ವಾರಗಳ ಹಿಂದೆ EG.5.1 ರೂಪಾಂತರವನ್ನು ಪತ್ತೆಹಚ್ಚಲು ಪ್ರಾರಂಭಿಸಿತ್ತು.

Also Read  ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರೀಕ ಗೌರವ

error: Content is protected !!
Scroll to Top