ಮಂಗಳೂರು: ದೋಣಿ ಮುಳುಗಡೆ; 9 ಮೀನುಗಾರರ ರಕ್ಷಣೆ..!

(ನ್ಯೂಸ್ ಕಡಬ)newskadaba.com ಮಂಗಳೂರು, ಆ.05. ಮೀನುಗಾರಿಕೆಗೆ ತೆರಳಿದ್ದ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಪಲ್ಟಿಯಾಗಿದ್ದು, ಈ ವೇಳೆ ಸ್ಥಳೀಯ ಮೀನುಗಾರರು ನೆರವಿಗೆ ಧಾವಿಸಿ 9 ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ ಎನ್ನಲಾಗಿದೆ.

ತೀರ ಪ್ರದೇಶದಿಂದ 5 ನಾಟಿಕಲ್ ಮೈಲುಗಳ ದೂರಕ್ಕೆ ಹೋದಾಗ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಪಲ್ಟಿಯಾಗಿದೆ.  ಶ್ರೀ ದುರ್ಗಾಪರಮೇಶ್ವರಿ ಹೆಸರಿನ ದೋಣಿ ಪಲ್ಟಿಯಾಗಿದ್ದು, ಇದರಲ್ಲಿ 9 ಮಂದಿ ಮೀನುಗಾರರು ಇದ್ದರು. ಆದರೆ, ಅದೃಷ್ಟವಶಾತ್ ದೋಣಿಯಲ್ಲಿದ್ದ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ. ದೋಣಿಯಲ್ಲಿದ್ದ ಮೀನುಗಾರರೊಬ್ಬರು ಸುಮಾರು ಹತ್ತು ಕಿಲೋ ಮೀಟರ್ ದೂರದಲ್ಲಿ ಬಲೆಗಳ ನಡುವೆ ಸಿಕ್ಕಿ ಬಿದ್ದಿರುವುದನ್ನು ಗಮನಿಸಿದ  ಮತ್ತೊಂದು ದೋಣಿಯ ಮೀನುಗಾರ ಇತರರಿಗೆ ಮಾಹಿತಿ ನೀಡಿದ್ದಾರೆ.

Also Read  ವಿಟ್ಲ: ರಕ್ಷಿತಾರಣ್ಯದಲ್ಲಿ ಬೆಂಕಿ ಅನಾಹುತ‌ ➤ ಅಪಾರ ಪ್ರಮಾಣದ ಮರಗಳು ನಾಶ

error: Content is protected !!
Scroll to Top