ಆತ್ಮಹತ್ಯೆಗೆ ಮುನ್ನ ಪತ್ನಿ, ಪುತ್ರಿಯರ ಶವದೊಂದಿಗೆ ಮೂರು ದಿನ ಕಳೆದ ಟೆಕ್ಕಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಕಾಡುಗೋಡಿಯಲ್ಲಿ ಇಬ್ಬರು ಮಕ್ಕಳು, ಹೆಂಡತಿಯನ್ನ ಹತ್ಯೆಗೈದ ಟೆಕ್ಕಿಯೊಬ್ಬ ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಬೆಚ್ಚಿಬೀಳಿಸುವ ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ ಎನ್ನಲಾಗಿದೆ.

31 ವರ್ಷದ ಟೆಕ್ಕಿ ವೀರಾರ್ಜುನ ವಿಜಯ್, ಪತ್ನಿ ಹೇಮಾವತಿ (29) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ಒಂದೂವರೆ ವರ್ಷದ ಮೋಕ್ಷ ಮೇಘ ನಯನ ಮತ್ತು 8 ತಿಂಗಳ ಮಗು ಸುನಯನಾ ಅವರನ್ನು ಕಾಡುಗೋಡಿಯ ಸೀಗೇಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡಿದ್ದ. ಪ್ರಕರಣದ ತನಿಖೆ ಕೈಗೊತ್ತಿಕೊಂಡ ಪೊಲೀಸರಿಗೆ, ವಿಜಯ್ ಪತ್ನಿಯನ್ನು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ. ಮೊದಲಿಗೆ ಹೆಂಡತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.

Also Read  5 ಅಡಿ ಆಳದ ಗುಂಡಿಗೆ ಬಿದ್ದ ಬೈಕ್ ► ಇಬ್ಬರು ಫೋಟೋಗ್ರಾಫರ್ ಗೆ ಗಾಯ..!!!

error: Content is protected !!
Scroll to Top