ತಮಿಳು ಹಾಸ್ಯ ನಟ ನಿಧನ; ಬೀದಿಯಲ್ಲಿ ಶವವಾಗಿ ಪತ್ತೆ

(ನ್ಯೂಸ್ ಕಡಬ)newskadaba.com ಮಧುರೈ, ಆ.05. 1980-90ರ ದಶಕದಲ್ಲಿ ಪೋಷಕ ಪಾತ್ರದಲ್ಲಿ ಮಿಂಚಿದ್ದ ಖ್ಯಾತ ಹಾಸ್ಯ ನಟ ಮೋಹನ್‌ (60 ವರ್ಷ) ನಿಗೂಢವಾಗಿ ಮೃತನಾಗಿದ್ದು, ಅವರ ಮೃತದೇಹ ತಮಿಳುನಾಡಿನ ಮದುರೈನ ತಿರುಪರಂಕುಂದ್ರಂನ ಬೀದಿಯಲ್ಲಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ವರದಿಗಳ ಪ್ರಕಾರ, 60 ವರ್ಷದ ನಟ ಮೋಹನ್ ಅವರು ತೀವ್ರ ಬಡತನಕ್ಕೆ ತುತ್ತಾಗಿದ್ದರು ಹಾಗೂ ಕೆಲಸ ಗಿಟ್ಟಿಸಲು ತೀವ್ರ ಒದ್ದಾಟ ಪಡುತ್ತಿದ್ದರು ಎಂದು ಹೇಳಲಾಗಿದೆ. ಅವರ ಪತ್ನಿಯು 10 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ನೂರಾರು ಸಿನಿಮಾಗಳಲ್ಲಿ ಮೋಹನ್‌ ನಟಿಸಿದ್ದರು. ಆದರೆ ಇತ್ತೀಚೆಗೆ ಅವರಿಗೆ ಅವಕಾಶಗಳ ಕೊರತೆಯಿಂದಾಗಿ ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ಅಷ್ಟೇ ಅಲ್ಲ ನಟ ಮೋಹನ್‌ ತಿರುಪರಂಕುಂದ್ರಂನ ದೇವಸ್ಥಾನದ ಸಮೀಪ ಭಿಕ್ಷೆ ಬೇಡಿ ಜೀವನ ಕಳೆಯುತ್ತಿದ್ದರು ಎಂದು ವರದಿ ವಿವರಿಸಿದೆ.

Also Read  ಮಂಗಳೂರು: ಅಂಬೇಡ್ಕರ್ ಪರಿ ನಿರ್ವಹಣಾ ದಿನಾಚರಣೆಯಲ್ಲಿ ಶಿಷ್ಟಾಚಾರದ ಉಲ್ಲಂಘನೆ ► ಜಿ.ಪಂ. ಅಧ್ಯಕ್ಷರನ್ನೇ ಬಿಟ್ಟು ತುರ್ತಾಗಿ ಕಾರ್ಯಕ್ರಮ ಮುಗಿಸಿದ ಸಮಾಜ ಕಲ್ಯಾಣ ಇಲಾಖೆ

error: Content is protected !!
Scroll to Top