ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಲು ಭಾರತ ಒಂದು ಜಿಗಿತದ ದೂರದಲ್ಲಿದೆ – ಅಧ್ಯಕ್ಷ ಆನಂದ್ ಮಹೀಂದ್ರಾ

(ನ್ಯೂಸ್ ಕಡಬ)newskadaba.com ನವದೆಹಲಿ, ಆ.05. ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಹೇಳಿದ್ದಾರೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನು ಉದ್ದೇಶಿಸಿ ಮಾತನಾಡಿದ್ದು, ಕೋವಿಡ್ ನಂತರದ ಪೂರೈಕೆ ಸರಪಳಿ ಅಡೆತಡೆಗಳು ದೇಶದ ಪರವಾಗಿ ಕೆಲಸ ಮಾಡಿದೆ. ಭಾರತ ವಿಶ್ವದ ಕಾರ್ಖಾನೆಯಾಗಿ ಬದಲಾಗಲು ಒಂದು ಜಿಗಿತದ ದೂರದಲ್ಲಿದೆ ಎಂದು ಆನಂದ್ ಮಹೀಂದ್ರಾ ಹೇಳಿದರು.

ಯಶಸ್ವಿ ಜಿಗಿತವನ್ನು ಮಾಡಲು, ಅನೇಕ ವಿಷಯಗಳನ್ನು ಒಟ್ಟಿಗೆ ತರಬೇಕು. ಭಾರತವು ಪೋಲ್ ವಾಲ್ಟ್(ಜಿಗಿತ) ಮಾಡಲು ಸಿದ್ಧವಾಗುತ್ತಿರುವ ಇಂದಿನ ಕಾಲದಲ್ಲಿ ಈ ಹೋಲಿಕೆಯು ಹೆಚ್ಚು ಸೂಕ್ತವಾಗಿದೆ. ನಾವು ಇದಕ್ಕಾಗಿ ಚೆನ್ನಾಗಿ ಸಿದ್ಧರಿದ್ದೇವೆ. ಹಲವು ದೇಶಗಳು ಆರ್ಥಿಕ ಹಿಂಜರಿತದತ್ತ ಸಾಗುತ್ತಿರುವಾಗ ಭಾರತದ ಆರ್ಥಿಕತೆ ಶೇ.7ರ ದರದಲ್ಲಿ ಬೆಳೆಯುತ್ತಿದೆ.

Also Read  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲ್ಲ➤ ಮುಂದಿನ ದಿನದಲ್ಲಿ ಮತ್ತಷ್ಟು ಸಡಿಲಿಕೆ

 

error: Content is protected !!
Scroll to Top