ಪೆಟ್ರೋಲ್‌, ಡೀಸೆಲ್‌ ದರ ಭಾರತದಲ್ಲೇ ಕಡಿಮೆ – ಇಂಧನ ಸಚಿವರ ಸಮರ್ಥನೆ..!

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಆ.05. ಕಳೆದ ಕೆಲವು ತಿಂಗಳುಗಳಿಂದ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆಯಾಗಿದ್ದು, ದೇಶದ ತೈಲ ಕಂಪನಿಗಳು ದೊಡ್ಡ ಲಾಭದಲ್ಲಿವೆ ಎಂದು ವರದಿಯಾಗಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಸರಕಾರ ಕಡಿಮೆ ಮಾಡಿಲ್ಲ. ದೇಶದಲ್ಲಿನ ತೈಲ ದರವನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಪುರಿ ಸಮರ್ಥಿಸಿಕೊಂಡಿದ್ದಾರೆ.

”ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ದರ ಏರುಪೇರಾದರೂ ಭಾರತವು ಪೆಟ್ರೋಲ್‌ ಡೀಸೆಲ್‌ನಂತಹ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಕೈಗೆಟಕುವಂತೆ ಮಾಡಿದೆ,” ಎಂದು ಅವರು ಹೇಳಿದ್ದಾರೆ. “ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ತುಂಬಾ ಕಡಿಮೆಯಿದ್ದು, ಅನೇಕ ದೊಡ್ಡ ಆರ್ಥಿಕ ರಾಷ್ಟ್ರಗಳಿಗೆ ಹೋಲಿಸಿದರೆ ಸ್ವಲ್ಪವಷ್ಟೇ ಜಾಸ್ತಿ ಇದೆ. ಕಳೆದ ಎರಡು ವರ್ಷಗಳಲ್ಲಿ ಭಾರತದಲ್ಲಿ ಪೆಟ್ರೋಲ್‌ ದರವು ಶೇ. 2.36ರಷ್ಟು ಮಾತ್ರ ಹೆಚ್ಚಳವಾಗಿದೆ. ಪಾಕಿಸ್ತಾನದಲ್ಲಿ ಶೇ. 50.83, ಬಾಂಗ್ಲಾದೇಶದಲ್ಲಿ ಶೇ. 30.11 ಮತ್ತು ಅಮೆರಿಕದಲ್ಲಿ ಶೇ. 30.15ರಷ್ಟು ಹೆಚ್ಚಳವಾಗಿದೆ,” ಎಂದು ಸಚಿವರು ವಿವರ ನೀಡಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group