ಬಂಟ್ವಾಳ: ದೇವಸ್ಥಾನದ ಅರ್ಚಕ ನಾಪತ್ತೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.05. ದೇವಸ್ಥಾನವೊಂದರ ಅರ್ಚಕ ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.


ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿರುವ ಕೃಷ್ಣ ಕೆ.ಬಿ.ಅವರ ಸಹೋದರ ಕೆ.ವಿ.ಜಗನ್ನಾಥ (43)ಅವರು ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. ಮನೆಗೂ ಹೋಗದೆ ಇದ್ದು ಮನೆಯವರಲ್ಲಿ ವಿಚಾರಿಸಿದಾಗ ಬಂದಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಹಿಂದೆಯೂ ಮನೆಯಲ್ಲಿ ಹೇಳದೆ ಹೋಗುವ ಅಭ್ಯಾಸವಾಗಿದ್ದು, ಎಲ್ಲಿಯಾದರೂ ಹೋಗಿ ದೇವರ ಧ್ಯಾನ ಮಾಡುತ್ತಿದ್ದರು. ಅವಿವಾಹಿತರಾಗಿರುವ ಅವರು ಬಿಎಸ್‌ಸಿ, ಎಂಬಿಎ ಪಧವೀಧರರಾಗಿದ್ದಾರೆ. ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಇದುವರೆಗೂ ಅವರು ವಾಪಾಸು ಬಾರದಿರುವ ಕಾರಣ ಪತ್ತೆಗಾಗಿ ದೂರು ನೀಡಲಾಗಿದೆ.

Also Read  ಬರೆಪ್ಪಾಡಿ- ಪಳ್ಳತ್ತಾರು ರಸ್ತೆ ಸಂಪೂರ್ಣ ಕೆಸರುಮಯ-ಗಿಡನೆಟ್ಟು ಗ್ರಾಮಸ್ಥರ ಪ್ರತಿಭಟನೆ

error: Content is protected !!
Scroll to Top