ಕೊಯಿಲ: ಜೀವನದಲ್ಲಿ ಜಿಗುಪ್ಸೆಯುಂಟಾಗಿ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಫೆ.03. ಠಾಣಾ ವ್ಯಾಪ್ತಿಯ ಕೊಯಿಲ ಫಾರ್ಮ್ ನಲ್ಲಿ ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರದಂದು ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಮಕುಂಜ ಗ್ರಾಮದ ಪೆರ್ಜಿ ಮನೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರ ಖಲಂದರ್ ಶಾಫಿ(34) ಎಂದು ಗುರುತಿಸಲಾಗಿದೆ. ಗುರುವಾರದಂದು ಮನೆಯಿಂದ ಹೊರಹೋಗಿದ್ದ ಈತ ಸಂಜೆಯಾದರೂ ಮನೆಗೆ ಬರದೆ ಇದ್ದುದರಿಂದ ಗಾಬರಿಗೊಂಡ ಮನೆಯವರು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದ್ದು, ಪತ್ತೆಯಾಗಿರಲಿಲ್ಲ. ಶನಿವಾರದಂದು ಕೊಯಿಲ ರೇಷ್ಮೆ ಫಾರ್ಮಿನ ಕಟ್ಟಡದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕಂಡು ಸ್ಥಳೀಯ ವ್ಯಕ್ತಿಯೋರ್ವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಖಲಂದರ್ ಗೆ ಸುಳ್ಯದಿಂದ ಮದುವೆಯಾಗಿದ್ದು, ಎರಡು ವರ್ಷಗಳ ಹಿಂದೆ ಇವರ ನಡುವೆ ವಿರಸ ಉಂಟಾಗಿ ಪತ್ನಿ ತವರಿಗೆ ತೆರಳಿದ್ದರೆನ್ನಲಾಗಿದೆ. ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಈತ ಕೆಲಸಕ್ಕೂ ಹೋಗದೆ ಕೈಯಲ್ಲಿ ದುಡ್ಡು ಇಲ್ಲದಿದ್ದುದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆತನ ತಂದೆ ಕಡಬ ಠಾಣೆಗೆ ದೂರು ನೀಡಿದ್ದಾರೆ.

Also Read  ಇನ್ನುಂದೆ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ ಎಷ್ಟು ಮೊತ್ತದ ದಂಡ ಗೊತ್ತೇ..!!?

error: Content is protected !!
Scroll to Top