ಚುನಾವಣೆಯಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಸಿಹಿ ಸುದ್ದಿ – ಸ್ಪರ್ಧಾ ವಯೋಮಿತಿ 25 ರಿಂದ 18ಕ್ಕೆ ಇಳಿಕೆ

(ನ್ಯೂಸ್ ಕಡಬ) newskadaba.com  ವದೆಹಲಿ, ಆ. 05. ಇನ್ನುಮುಂದೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ವಿಧಿಸಲಾಗಿರುವ ಕನಿಷ್ಠ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದ್ದು, ಇದರಿಂದ ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

 

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು 25 ರಿಂದ 18ಕ್ಕೆ ಇಳಿಸಲು ಶುಕ್ರವಾರದಂದು ಸಂಸದೀಯ ಸಮಿತಿ ಸಲಹೆ ನೀಡಿದೆ. ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮೊದಲಾದ ದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ರಾಷ್ಟ್ರೀಯ ಚುನಾವಣೆಗಳಲ್ಲಿ ತೊಡಗಿಸಿಕೊಳ್ಳಲು ಕನಿಷ್ಠ ವಯೋಮಿತಿ 18 ವರ್ಷ ಇರಬೇಕು. ಇದರಿಂದ ಯುವಕರು ಪ್ರಜಾಪ್ರಭುತ್ವದಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದು ಹೇಳಲಾಗಿದೆ.

Also Read  ಗಣೇಶ ವಿಸರ್ಜನೆಯ ವೇಳೆ ಮೂವರಿಗೆ ಚಾಕು ಇರಿತ

ದೇಶದಲ್ಲಿ ಸದ್ಯಕ್ಕೆ ಇರುವ ನಿಯಮಗಳ ಪ್ರಕಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ  25 ವರ್ಷ ಹಾಗೂ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ 30 ವರ್ಷ, ಮತದಾರರಾಗಿ ನೋಂದಾಯಿಸಲು 18 ವರ್ಷ ಆಗಿರಬೇಕು.

error: Content is protected !!
Scroll to Top