ಕ್ಷುಲ್ಲಕ ಕಾರಣಕ್ಕೆ 7 ತಿಂಗಳ ಗರ್ಭಿಣಿಯ ಕೊಂದ ಪಾಪಿಗಳು..!

(ನ್ಯೂಸ್ ಕಡಬ)newskadaba.com ಬಿಹಾರ, ಆ.05. ವರದಕ್ಷಿಣೆಯಾಗಿ ಮದುವೆ ಸಮಯದಲ್ಲಿ ಫ್ರಿಡ್ಜ್ ಗಿಫ್ಟ್ ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.


ಅಂಗೂರಿ ಬೇಗಂ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು ಎನ್ನಲಾಗಿದೆ. ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Also Read  ಪುತ್ರನ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು


ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಂಗೂರಿ ಮೃತದೇಹವನ್ನು ಪೊಲೀಸರು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ರವಾನಿಸಿದ್ದಾರೆ. ಈ ವೇಳೆ ಆಕೆ 7 ತಿಂಗಳ ಗರ್ಭಿಣಿ ಎಂಬುದು ಗೊತ್ತಾಗಿದೆ ಎನ್ನಲಾಗಿದೆ.

error: Content is protected !!
Scroll to Top