ಗುಂಡಿನ ಕಾಳಗ- ಮೂವರು ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಕುಲ್ಗಾಮ್‌, . 05. ಜಮ್ಮು ಮತ್ತು ಕಾಶ್ಮೀರ ಕುಲ್ಗಾಮ್‌ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಎನ್‌ ಕೌಂಟರ್‌ನಲ್ಲಿ ಮೂವರು ಸೇನಾ ಯೋಧರು ಹುತಾತ್ಮರಾಗಿರುವ ಕುರಿತು ವರದಿಯಾಗಿದೆ.

ಭಯೋತ್ಪಾದಕರು ಕುಲ್ಗಾಮ್‌ ನ ಹಾಲನ್ ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ, ಭದ್ರತಾ ಪಡೆಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಈ ಗುಂಡಿನ ಕಾಳಗದಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದು, ನಂತರ ಮೃತಪಟ್ಟಿರುವುದಾಗಿ ಸೇನೆ ಹೇಳಿದೆ. ಈ ನಡುವೆ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಶ್ರೀನಗರ ಮೂಲದ ಚಿನಾ ಕಾರ್ಪ್ಸ್ ಆಫ್ ಅರ್ಮಿ ಟ್ವೀಟ್ ಮೂಲಕ ಹೇಳಿದೆ.

Also Read  38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ನೀಡಲಾಗಿದೆ    ರಾಜ್ಯ ಸರ್ಕಾರ ಹೇಳಿಕೆ

error: Content is protected !!
Scroll to Top