‘ಮೋದಿ ಕೇರ್’ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ ► ಆಗಸ್ಟ್ 15 ರಿಂದ ಜಾರಿ ಸಂಭವ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.03. “ಮೋದಿ ಕೇರ್’ ಎಂದೇ ಹೇಳಲಾದ ರಾಷ್ಟ್ರೀಯ ಆರೋಗ್ಯ ವಿಮೆ ಯೋಜನೆಯನ್ನು ಬಜೆಟ್ ನಲ್ಲಿ ಘೋಷಿಸಲಾಗಿದ್ದರೂ, ಆಗಸ್ಟ್ 15 ಅಥವಾ ಅಕ್ಟೋಬರ್ 02 ರಂದು ಜಾರಿಗೆ ಬರುವ ಸಾಧ್ಯತೆಯಿದೆ.

10 ಕೋಟಿ ಕುಟುಂಬಗಳಿಗೆ ಆರೋಗ್ಯ ವಿಮೆ ಒದಗಿಸುವ ಈ ಯೋಜನೆಗೆ 1000 ರೂ.ನಿಂದ 1200 ರೂ.ವರೆಗೆ ಪ್ರೀಮಿಯಂ ನಿಗದಿಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ರಾಜ್ಯಗಳ ಸಹಭಾಗಿತ್ವದಲ್ಲಿ ಜಾರಿಗೆ ಬರಲಿದ್ದು, ಶೇ. 40ರಷ್ಟು ಮೊತ್ತವನ್ನು ರಾಜ್ಯ ಸರ್ಕಾರಗಳು ಭರಿಸಬೇಕಿದೆ. ಮೊದಲ ವರ್ಷ ಶೇ.50 ರಷ್ಟು ಕುಟುಂಬಗಳಿಗೆ ವಿಮೆ ಒದಗಿಸಲಿದೆ ಎಂದು ಊಹಿಸಿದರೂ, ಸುಮಾರು 5-6 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಈ ಪೈಕಿ ಕೇಂದ್ರ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂ. ಹೊರೆ ಬೀಳುವ ಸಾಧ್ಯತೆಯಿದೆ. ಈ ವೆಚ್ಚವನ್ನು ಸರಿದೂಗಿಸಿಕೊಳ್ಳಲು ಶೇ.1 ಹೆಚ್ಚುವರಿ ಸೆಸ್ ವಿಧಿಸಲು ತೀರ್ಮಾನಿಸಲಾಗಿದೆ.
ಅಲ್ಲದೆ ಈಗಾಗಲೇ ಚಾಲ್ತಿಯಲ್ಲಿರುವ ರಾಷ್ಟ್ರೀಯ ಸ್ವಾಸ್ಥ್ಯ ವಿಮೆ ಯೋಜನೆಯನ್ನು ಇದರಲ್ಲಿ ವಿಲೀನಗೊಳಿಸಲಾಗುತ್ತದೆ. ಪ್ರಸ್ತುತ 1ಲಕ್ಷ ರೂ. ವಾರ್ಷಿಕ ಆರೋಗ್ಯ ವಿಮೆ ಕವರೇಜ್ ಅನ್ನು ಈ ಯೋಜನೆ ಹೊಂದಿತ್ತು.

Also Read  ➤ ಬೆಳಗಾವಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ..

ಖಾಸಗಿ ವಿಮೆ ಕಂಪನಿಗಳು ಈ ಹಿಂದೆ ಒದಗಿಸುತ್ತಿದ್ದ ಮರುಪಾವತಿ ಮಾದರಿಯನ್ನು ಅನುಸರಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಅಂದರೆ ಮೊದಲು ವೈದ್ಯಕೀಯ ಸೇವೆ ಪಡೆದು, ನಂತರ ವೆಚ್ಚದ ಬಿಲ್ ಸಲ್ಲಿಸಿದರೆ, ಮರುಪಾವತಿ ಮಡಲಾಗುತ್ತದೆ. ಆದರೆ ಈ ವಿಧಾನದಲ್ಲಿ ತೊಡಕುಗಳು ಹಾಗೂ ದುರ್ಬಳಕೆ ಅವಕಾಶವಿದೆ. ಹಾಗಾಗಿ, ಇದರ ಬದಲಿಗೆ ವಿಮೆ ಅಥವಾ
ಟ್ರಸ್ಟ್ ವಿಧಾನದಲ್ಲಿ ವಿಮೆಯನ್ನು ಜಾರಿಗೆ ತರಲಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ವಿಮೆ ವಿಧಾನದಲ್ಲಿ ಜಾರಿಗೆ ತಂದರೆ ಪ್ರೀಮಿಯಂ ಮೊತ್ತ ಕಡಿಮೆ ಇರಲಿದೆ. ಸರ್ಕಾರ ಟೆಂಡರ್ ಕರೆದು ಖಾಸಗಿ ಅಥವಾ ಸರ್ಕಾರಿ ವಿಮೆ ಕಂಪನಿಗಳಿಗೆ ಜವಾಬ್ದಾರಿ ನೀಡಲಿದೆ. ಇದರಲ್ಲಿ ಯಾವ ಸಂಸ್ಥೆ ಕಡಿಮೆ ಪ್ರೀಮಿಯಂ ಪ್ರಸ್ತಾಪಿಸುತ್ತದೆಯೋ ಆ ಕಂಪನಿಗೆ ಹೊಣೆ ನೀಡಲಾಗುತ್ತದೆ. ಇದರಿಂದ ಸರ್ಕಾರ ಯೋಜನೆ ಜಾರಿಗೆ ವೆಚ್ಚ ಮಾಡುವ ಅಗತ್ಯವಿರುವುದಿಲ್ಲ. ಅಲ್ಲದೆ ದೇಶದ ಎಲ್ಲ ಆಸ್ಪತ್ರೆಗಳನ್ನೂ ಈ ವಿಮೆಯ ವ್ಯಾಪ್ತಿಗೆ ತರುವ ಉದ್ದೇಶ ಸರಕಾರಕ್ಕಿದೆ.

Also Read  ಜೇನುಹುಳಗಳ ದಾಳಿಗೆ ಬಾಲಕ ಮೃತ್ಯು

error: Content is protected !!
Scroll to Top