ಮಾದಕ ವಸ್ತು ಮಾರಾಟ ಯತ್ನ – 2 ಕೆ.ಜಿ ಗಾಂಜಾ ಸಹಿತ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 05. ದ್ವಿಚಕ್ರ ವಾಹನದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಸುಳಿವು ಪಡೆದ ನಗರ ಅಪರಾಧ ವಿಭಾಗದ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಬಂಧಿತನನ್ನು ಕೋಡಿಕಲ್ ಮುಸ್ತಫಾ ಕಂಪೌಂಡ್ ನಿವಾಸಿ ಮೊಹಮ್ಮದ್ ಅಝೀಝ್ ಯಾನೆ ಅಜೀಜ್ (40)  ಎಂದು ಗುರುತಿಸಲಾಗಿದೆ. ಈತನಿಂದ  50 ಸಾವಿರ ಮೌಲ್ಯದ ಎರಡು ಕಿಲೋ ಗಾಂಜಾ, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು ಒಟ್ಟು 1.05 ಲಕ್ಷ ರೂ.ಸೊತ್ತು ಜಪ್ತಿ ಮಾಡಲಾಗಿದೆ.

Also Read  ಮಂಗಳೂರು: ನ್ಯಾಯಾಲಯದ 6ನೇ ಮಹಡಿಯಿಂದ ಜಿಗಿದ ಪೋಕ್ಸೋ ಪ್ರಕರಣದ ಆರೋಪಿ ➤ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top