ಜೈಲಿನಿಂದ ಹೊರಬಂದ ಕುಖ್ಯಾತ ರೌಡಿಶೀಟರ್ ನ ಬರ್ಬರ ಹತ್ಯೆ

 (ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ಜೈಲಿನಿಂದ ಹೊರಬಂದ ಕೆಲವೇ ಗಂಟೆಗಳಲ್ಲಿ ಕುಖ್ಯಾತ ರೌಡಿಶೀಟರ್ ಓರ್ವನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ.

ಕೊಲೆಯಾದ ರೌಡಿಶೀಟರ್ ನನ್ನು ಸಿದ್ದಾಪುರ ಮಹೇಶ್​ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿಶೀಟರ್​​​ ಗಳಾದ​​​ ನಾಗ, ಡಬಲ್ ಮೀಟರ್​ ಮೋಹನ್​​ ಹಾಗು ಸುನೀಲ್​ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ನಾಗ ಮತ್ತು ಸಿದ್ದಾಪುರ ಮಹೇಶ್ ಮಧ್ಯೆ ಮೊದಲಿನಿಂದಲೂ ದ್ವೇಷವಿದ್ದು, 2020 ರಲ್ಲಿ ಜಯನಗರದಲ್ಲಿ ನಡೆದಿದ್ದ ಮದನ್​ ಎಂಬಾತನ ಕೊಲೆ ಪ್ರಕರಣದಲ್ಲಿ  ಭಾಗಿಯಾಗಿ ಮಹೇಶ್​ ಜೈಲು ಸೇರಿದ್ದ. ಇದೀಗ ಜೈಲಿನಿಂದ ಹೊರ ಬರಲು ಕಾಯುತ್ತಿದ್ದ ಗ್ಯಾಂಗ್ ಜೈಲಿನಿಂದ ಬರುವಾಗಲೇ ಕಾರು ಅಡ್ಡಗಟ್ಟಿ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

Also Read  KSRTC ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ➤ ಸವಾರ ಮೃತ್ಯು

error: Content is protected !!
Scroll to Top