ಮೊಗೇರ್ ಜಾತಿಯನ್ನು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವ ಹಿನ್ನೆಲೆ – ಆಕ್ಷೇಪಣೆಗಳಿಗೆ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 05. ಮೊಗೇರ್ ಜಾತಿಯನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರಿಸುವ ಹಿನ್ನೆಲೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ: 30-03-2002 ರ ಪ್ರವರ್ಗ-1 ಅನುಕ್ರಮ ಸಂಖ್ಯೆ 6 (ae)ರಲ್ಲಿ ಮೊಗೇರ್ (Moger) ಜಾತಿಯನ್ನು ಕೈಬಿಡುವ ಬಗ್ಗೆ ಸಾರ್ವಜನಿಕರು/ಸಂಘ-ಸಂಸ್ಥೆಗಳಿಂದ ಆಕ್ಷೇಪಣೆ/ತಕರಾರುಗಳನ್ನು ಆಹ್ವಾನಿಸಲಾಗಿದೆ.


ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಣೆ ಹೊರಡಿಸಿದ 10 ದಿನಗಳೊಳಗೆ ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಿಜೈ-ಕಾಪಿಕಾಡು, ಆನೆಗುಂಡಿ ರಸ್ತೆ, ಮಂಗಳೂರು-575004-ಇವರಿಗೆ ಲಿಖಿತವಾಗಿ ಆಕ್ಷೇಪಣೆ/ತಕರಾರುಗಳನ್ನು ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಬಂಟ್ವಾಳ: ಅಕ್ರಮ ಗೋಸಾಗಾಟ ತಡೆಹಿಡಿದ ಬಜರಂಗದಳ ಕಾರ್ಯಕರ್ತರು ➤ ಗೋವುಗಳ ರಕ್ಷಣೆ

error: Content is protected !!
Scroll to Top