ನಾಳೆ (ಆ. 05) ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 04. ನಾಳೆ (ಆ. 05) ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಲಬುರ್ಗಿಯಲ್ಲಿ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಯೋಜನೆಗೆ ಅಧಿಕೃತ ಜಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ಈ ಬಗ್ಗೆ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ಕಲಬುರ್ಗಿಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ಸಿಗಲಿದೆ. ಆರ್ಥಿಕವಾಗಿ ಸದೃಢವಾಗಬೇಕಾದರೆ ಜನರ ಕೈ ಬಲಪಡಿಸಬೇಕು. ನಾವು ಅವರ ಕೈ ಬಲಪಡಿಸಿದರೇ, ಅವರು ಹೆಚ್ಚು ದುಡಿಯಲಿದ್ದಾರೆ. ಆ ಮೂಲಕ ಹೆಚ್ಚು ತೆರಿಗೆ ಸರ್ಕಾರಕ್ಕೆ ಬರಲಿದೆ ಎಂದರು. ನಾಳೆ ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ಸಿಎಂ ಮಾಡಲಿದ್ದಾರೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟ್ ವರೆಗೆ ವಿದ್ಯುತ್ ಗ್ರಾಹಕರಿಗೆ ಉಚಿತವಾಗಿ ಬಳಸೋದಕ್ಕೆ ಅವಕಾಶ ಸಿಗಲಿದೆ.

Also Read  ಮೊಬೈಲ್ ಫೋನ್ ಬಳಸುತ್ತಿರುವ ವೇಳೆ ಸ್ಟೋಟಗೊಂಡು ಎಂಟು ವರ್ಷದ ಬಾಲಕಿ ಮೃತ್ಯು.!

error: Content is protected !!
Scroll to Top