ಬೆಳ್ಳಾರೆ ಝಕರಿಯ್ಯ ಜುಮಾ ಮಸೀದಿ ಆಡಳಿತ ಮಂಡಳಿಗೆ ಸೆ. 09ರಂದು ಚುನಾವಣೆ – ನಾಮಪತ್ರ ಸಲ್ಲಿಕೆಗೆ ಆ. 17ರಂದು ಲಾಸ್ಟ್ ಡೇಟ್..!

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ. 04. ಇಲ್ಲಿನ ಝಕರಿಯ್ಯ ಮಸೀದಿಯ ಆಡಳಿತ ಮಂಡಳಿಯಲ್ಲಿ ವಿವಾದವಿದ್ದ ಕಾರಣ ಸುಮಾರು 3 ವರ್ಷಗಳಿಂದ ಮಸೀದಿಗೆ ಆಡಳಿತಾಧಿಕಾರಿಯ ನೇಮಕ ಮಾಡಲಾಗಿತ್ತು. ಇದೀಗ ವಕ್ಫ್ ಮಂಡಳಿಯು ಮಸೀದಿಯ ಆಡಳಿತ ಮಂಡಳಿ ರಚನೆಗೆ ಚುನಾವಣೆಯನ್ನು ಘೋಷಿಸಿದ್ದು, ಸೆ. 09 ರಂದು ಚುನಾವಣೆ ನಡೆಯಲಿದೆ.


ಚುನಾವಣೆಗೆ ನಾಮಪತ್ರ ಸಲ್ಲಿಸುವವರು ಆ. 08 ರಿಂದ ಆ.17 ರವರೆಗೆ ಸಾರ್ವತ್ರಿಕ ರಜೆ ಹೊರತುಪಡಿಸಿ ಉಳಿದ ದಿನದಲ್ಲಿ ದ.ಕ.ಜಿಲ್ಲಾ ವಕ್ಫ್ ಕಚೇರಿ ಮಂಗಳೂರು ಇಲ್ಲಿ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಪರಿಶೀಲನೆಯು ಆ. 23 ರಂದು ನಡೆಯಲಿದೆ ಮತ್ತು ನಾಮಪತ್ರ ಹಿಂತೆಗೆದುಕೊಳ್ಳಲು ಆ. 28, 29ರಂದು ನಿಗದಿಪಡಿಸಲಾಗಿದೆ. ಆ.‌ 31ರಂದು ಚಿಹ್ನೆಗಳ ಹಂಚಿಕೆ ನಡೆಯಲಿದೆ. ಮತದಾನವು ಸೆ. 09 ರಂದು ಬೆಳಿಗ್ಗೆ ಗಂಟೆ 8.00 ರಿಂದ ಅಪರಾಹ್ನ ಗಂಟೆ 3.00 ರವರೆಗೆ ಬೆಳ್ಳಾರೆ ಮಸೀದಿ ಆವರಣದ ಮದ್ರಸದ ಕಟ್ಟಡದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಭಾರತೀಯ ಅಂಚೆ ಇಲಾಖೆ ➤ಮಕ್ಕಳ ಹಕ್ಕುಗಳು- ‘ಅಂಚೆ ಚೀಟಿ ಡಿಸೈನ್ ಸ್ಪರ್ಧೆ’

error: Content is protected !!
Scroll to Top