ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ- ತರಗತಿ ಸರಿದೂಗಿಸಲು ಶನಿವಾರದಂದು ಫುಲ್ ಕ್ಲಾಸ್

(ನ್ಯೂಸ್ ಕಡಬ) newskadaba.com  ಸುಳ್ಯ, . 04. ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಮಳೆಯ ಕಾರಣ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಇದೀಗ ರಜಾದಿನಗಳನ್ನು ಸರಿದೂಗಿಸಲು ಶನಿವಾರದಂದು ಮಧ್ಯಾಹ್ನದ ಬಳಿಕವೂ ತರಗತಿ ನಡೆಸಿ ಪಾಠಗಳನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ವೇಳಾಪಟ್ಟಿಯನ್ನೂ ಪ್ರಕಟಿಸಿದೆ.

ಒಂದು ದಿನದ ರಜೆಗೆ ಎರಡು ಶನಿವಾರಗಳಂದು ತರಗತಿ ನಡೆಸಿ ಸರಿದೂಗಿಸಲು ಇಲಾಖೆ ಸೂಚಿಸಿದೆ. ಇದಕ್ಕೆ ಸಂಬಂಧಿಸಿ ವೇಳಾಪಟ್ಟಿಯನ್ನು ರಚಿಸಲಾಗಿದ್ದು, ವೇಳಾಪಟ್ಟಿ ನವೆಂಬರ್ 04ರ ವರೆಗೆ ಅನ್ವಯವಾಗಲಿದೆ.

Also Read  ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ

error: Content is protected !!
Scroll to Top