ಪುರುಷರ ಲೈಂಗಿಕ ಕ್ರಿಯೆ ಸುಧಾರಣೆಗೆ ಲವಂಗ ರಾಮಬಾಣ..!

(ನ್ಯೂಸ್ ಕಡಬ) newskadaba.com ಆ. 04. ನೀವು ಲೈಂಗಿಕ ಸಮಸ್ಯೆಗಳು ಅಥವಾ ಸ್ಖಲನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ ಚಿಂತಿಸಬೇಡಿ. ಇಂದಿನಿಂದಲೆ ಪ್ರತಿನಿತ್ಯ 3 ಲವಂಗ ತಿನ್ನೋದನ್ನು ಅಭ್ಯಾಸ ಮಾಡಬೇಕು ಎಂದು ಸಂಶೋಧನೆಯೊಂದು ಹೇಳಿದೆ. ಈ ಸಲಹೆಗಳನ್ನು ಸರಿಯಾಗಿ ಪಾಲಿಸಿದರೆ ನೀವು ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಗೆ ಬರಲು ಸಹಾಯಕವಾಗುತ್ತದೆ.

ಸಾಂಬಾರು ಪದಾರ್ಥಗಳಲ್ಲಿ ಬಳಸುವ ಲವಂಗವು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರಲ್ಲಿ ಮುಖ್ಯವಾದದ್ದು ಜೀರ್ಣಕ್ರಿಯೆ ಸುಧಾರಿಸುವುದು. ಲವಂಗದಲ್ಲಿ ವಿಟಮಿನ್-ಬಿ1, ಬಿ2, ಬಿ4, ಬಿ6, ಬಿ9 ಮತ್ತು ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟಿನ್ ಅಂಶಗಳಿದ್ದು, ಇದು ಪುರುಷರ ಲೈಂಗಿಕ ಸಮಸ್ಯೆಗಳಿಗೂ ಸಹಾಯ ಮಾಡುತ್ತದೆ. ಅಲ್ಲದೇ, ಪ್ರೋಟೀನ್, ಕಾರ್ಬೋಹೈಡ್ರೇಟ್‌ ಗಳಂತಹ ಅಂಶಗಳೂ ಕೂಡಾ ಲವಂಗದಲ್ಲಿ ಕಂಡುಬರುತ್ತವೆ. ಈ ಎಲ್ಲಾ ಪೋಷಕಾಂಶಗಳು ಆರೋಗ್ಯಕರ ದೇಹಕ್ಕೆ ಅಗತ್ಯವೆಂದು ಪರಿಗಣಿಸಲಾಗಿದೆ. ಆದ್ದರಿಂದ ಪ್ರತಿನಿತ್ಯ 3 ಲವಂಗ ಸೇವಿಸಿ ಎಂದು ಸಂಶೋಧನೆಯೊಂದು ಹೇಳುತ್ತದೆ.

Also Read  ಮದುವೆ ಕಾರ್ಯಕ್ರಮಗಳು ಅರ್ಧಕ್ಕೆ ನಿಲ್ಲುವುದಕ್ಕೆ ಕಾರಣ ಏನು ಎಂಬುದು ತಿಳಿದಿದೆಯೇ ನಿಮಗೆ ?

ಲವಂಗವನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ತಿಂದು ಒಂದು ಲೋಟ ಉಗುರುಬೆಚ್ಚನೆಯ ನೀರನ್ನು ಕುಡಿದರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ದೂರವಾಗುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಲೈಂಗಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಆದ್ದರಿಂದ, ಯಾವುದೇ ಲೈಂಗಿಕ ಸಮಸ್ಯೆಗಳನ್ನು ಹೊಂದಿರುವ ಪುರುಷರು ಲವಂಗವನ್ನು ಸೇವಿಸಬೇಕು, ಏಕೆಂದರೆ ಲವಂಗದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಸತುವುಗಳಂತಹ ಖನಿಜಗಳು ಸಮೃದ್ಧವಾಗಿವೆ. ಇವೆಲ್ಲವೂ ಆರೋಗ್ಯಕ್ಕೆ ಅಗತ್ಯವಾದ ಅಂಶಗಳೆಂದು ಪರಿಗಣಿಸಲಾಗಿದೆ.

ಎಚ್ಚರಿಕೆ: ಲವಂಗವನ್ನು ಸೇವಿಸುವುದರಿಂದ ವೀರ್ಯ ವೃದ್ಧಿಗೆ ಸಹಾಯವಾಗುತ್ತದೆ. ಹಾಗಂತ ಮಿತಿಮೀರಿದ ಲವಂಗ ಸೇವನೆ ಬೇಡ. ಏಕೆಂದರೆ ಮಿತಿಮೀರಿದ ಸೇವನೆಯು ಪುರುಷ ಹಾರ್ಮೋನ್ ಟೆಸ್ಟೋಸ್ಟೆರಾನ್ ಅನ್ನು ಕಡಿಮೆ ಮಾಡುತ್ತದೆ. ಅದಕ್ಕಾಗಿಯೇ ಕೇವಲ ಎರಡು ಅಥವಾ ಮೂರು ಲವಂಗ ತಿನ್ನುವುದು ಉತ್ತಮ.

Also Read  ಅಪಸ್ಮಾರ ಮತ್ತು ಅಪನಂಬಿಕೆಗಳು “ವಿಶ್ವ ಅಪಸ್ಮಾರ ಜಾಗೃತಿ ದಿನ - ಫೆಬ್ರವರಿ 12”

error: Content is protected !!
Scroll to Top