ಟ್ರಕ್ ಢಿಕ್ಕಿ- ಯವಕ ಮೃತ್ಯು; ಅಂಗಾಂಗ ದಾನ

(ನ್ಯೂಸ್ ಕಡಬ) newskadaba.com ಕಾಪು, . 04. ರಸ್ತೆ ದಾಟುವ ಸಂದರ್ಭ ಟ್ರಕ್ ಢಿಕ್ಕಿ ಹೊಡೆದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಾವರ ನಿವಾಸಿ ಪ್ರಶಾಂತ್ (37) ಎಂಬವರ ಮೆದುಳು ನಿಷ್ಕ್ರಿಯಗೊಂಡಿದ್ದು, ಇದರಿಂದ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್, ಬುಧವಾರದಂದು ಕೆಲಸ ಮುಗಿಸಿ ಮನೆಗೆ ತೆರಳಲು ಹೆದ್ದಾರಿ ದಾಟುತ್ತಿದ್ದ ವೇಳೆ ಲಾರಿಯೊಂದು ಡಿಕ್ಕಿ ಹೊಡೆದು ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಮಾದಕ ವಸ್ತು ಎಂಡಿಎಂಎ ಮಾರಾಟ….! - ಮೂವರು ಆರೋಪಿಗಳು ಅರೆಸ್ಟ್

ಮಣಿಪಾಲ ಆಸ್ಪತ್ರೆಯ ವೈದ್ಯರು ಪ್ರಶಾಂತ್ ಅವರ ಕುಟುಂಬ ಸದಸ್ಯರಿಗೆ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸಿದ್ದು, ಅದಕ್ಕೆ ಅವರ ಸಹೋದರಿ ಪ್ರಮೀಳಾ ಸಹಮತ ವ್ಯಕ್ತಪಡಿಸಿದ್ದಾರೆ. ಅದರಂತೆ ಪ್ರಶಾಂತ್‌ನ ಕಿಡ್ನಿ ಮತ್ತು ಲಿವರ್‌ಗಳನ್ನು ಪಡೆದು ಸುರಕ್ಷಿತವಾಗಿ ಮಂಗಳೂರು ಮತ್ತು ಬೆಂಗಳೂರಿಗೆ ಸಾಗಿಸಲಾಯಿತು. ಅಪಘಾತಕ್ಕೆ ಕಾರಣರಾದ ಟ್ರಕ್ ಚಾಲಕನ ವಿರುದ್ಧ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top