ಬೆಳ್ಳಾರೆ: ಗುಡ್ ಡೇ ಬಿಸ್ಕತ್ತು ಪ್ಯಾಕೆಟ್ ನಲ್ಲಿ ಸತ್ತ ಹುಳು ಪತ್ತೆ – ಕಂಪೆನಿಯ ವಿರುದ್ಧ ಗ್ರಾಹಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಆ.04. ಗ್ರಾಹಕರೋರ್ವರು ಖರೀದಿಸಿದ್ದ ಗುಡ್ ಡೇ ಬಿಸ್ಕೆಟ್ ನಲ್ಲಿ ಸತ್ತ ಹುಳವೊಂದು ಕಂಡುಬಂದ ಘಟನೆ ಬೆಳ್ಳಾರೆಯಿಂದ ವರದಿಯಾಗಿದೆ.

ಬೆಳ್ಳಾರೆಯ ಮಹಾಲಕ್ಷ್ಮಿ ಸ್ಟೋರ್ ನಿಂದ ಗ್ರಾಹಕರೋರ್ವರು ಗುಡ್ ಡೇ ಬಿಸ್ಕತ್ತನ್ನು ಖರೀದಿಸಿ ಮನೆಗೆ ಕೊಂಡು ಹೋದ ವೇಳೆ ಬಿಸ್ಕತ್ತು ಪ್ಯಾಕೆಟ್ ನಲ್ಲಿ ಸತ್ತ ಹುಳ ಹಾಗೂ ಹುಳದ‌ ಮೊಟ್ಟೆಯೊಂದು ಕಂಡುಬಂದಿದೆ. ತಕ್ಷಣವೇ ಅಂಗಡಿ ಮಾಲಕರಿಗೆ ಈ ವಿಚಾರ ತಿಳಿಸಿದಾಗ ಅವರು ಕಂಪೆನಿಯ ವಿತರಕರಿಗೆ ಈ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕಂಪೆನಿಯ ಕಡೆಯಿಂದ ಬಾರದ ಹಿನ್ನೆಲೆಯಲ್ಲಿ ಗ್ರಾಹಕರು ಇದೀಗ ಕಂಪೆನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಧುನಿಕ ತಂತ್ರಜ್ಞಾನದಲ್ಲಿ ತಯಾರಾಗುವ ಪ್ರತಿಷ್ಠಿತ ಕಂಪೆನಿಯ ಉತ್ಪನ್ನಗಳೇ ಈ ರೀತಿಯಾದರೆ ಇದಕ್ಕೆ ಯಾರು ಹೊಣೆ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ.

Also Read  ಬಸ್ ಪಾಸ್ ಅವ್ಯವಸ್ಥೆ ➤ ಜಿಲ್ಲಾದ್ಯಂತ ಸಿಎಫ್ಐ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಟನೆ

error: Content is protected !!
Scroll to Top