ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಿನ್ಸಿಪಾಲ್- ಅರೆಸ್ಟ್

crime, arrest, suspected

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 04. ಪ್ರಾಂಶುಪಾಲನೇ ಹತ್ತು ವರ್ಷದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ರಾಜ್ಯ ರಾಜಧಾನಿಯ ವರ್ತೂರು ಸಮೀಪದ ಗುಂಜೂರು ಖಾಸಗಿ ಶಾಲೆಯೊಂದರಲ್ಲಿ ನಡೆದಿರುವ ಕುರಿತು ವರದಿಯಾಗಿದೆ.


ಎಂದಿನಂತೆ ಗುರುವಾರದಂದು ಬೆಳಗ್ಗೆ ಶಾಲೆಗೆ ಹೋಗಿದ್ದ ಬಾಲಕಿಯನ್ನು ತನ್ನ ಕೊಠಡಿಗೆ ಕರೆಸಿಕೊಂಡ ಪ್ರಾಂಶುಪಾಲ, ಅತ್ಯಾಚಾರವೆಸಗಿ ನಂತರ ಕೇಕ್ ತಿನ್ನಲು ಕೊಟ್ಟು ಸಮಾಧಾನ ಮಾಡಿ ಮನೆಗೆ ಕಳಹಿಸಿದ್ದನು. ಮನೆಗೆ ಬಂದ ಬಾಲಕಿ ಹೊಟ್ಟೆನೋವು ಎಂದು ಹೇಳಿದ್ದಳು.

ಬಾಲಕಿ ತಾಯಿ ಸ್ನಾನ ಮಾಡಿಸಲು ಕರೆದುಕೊಂಡು ಹೋದಾಗ ರಕ್ತದ ಕಲೆಗಳನ್ನು ನೋಡಿ ಶಾಲೆಯಲ್ಲಿ ಏನಾಗಿದೆ ಎಂದು ಕೇಳಿದಾಗ ಬಾಲಕಿ ನಡೆದಿರುವ ವಿಷಯವನ್ನೆಲ್ಲ ಅಮ್ಮನ ಬಳಿ ತಿಳಿಸಿದ್ದಾಳೆ. ಈ ಕುರಿತು ತಾಯಿ ವರ್ತೂರು ಪೊಲೀಸರಿಗೆ ದೂರು ನೀಡಿದ ಬಳಿಕ ವರ್ತೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.

Also Read  ವಿಟ್ಲ: ಉದ್ಯಮಿಯ ಮನೆಗೆ ನುಗ್ಗಿ ಮಹಿಳೆಯ ಮೇಲೆ ಹಲ್ಲೆಗೆ ಯತ್ನ ➤ ಸಾರ್ವಜನಿಕರಿಂದ ಗೂಸಾ

error: Content is protected !!
Scroll to Top