(ನ್ಯೂಸ್ ಕಡಬ) newskadaba.com ಬೆಂಗಳೂರು,ಆ. 04. ದಿನದಿಂದ ದಿನಕ್ಕೆ ದೇಶದಲ್ಲಿ ತರಕಾರಿಗಳ ಬೆಲೆ ಹೆಚ್ಚಾಗುತ್ತಿದೆ. ಈಗಾಗಲೇ ಗ್ರಾಹಕರ ಕೈಸುಟ್ಟಿರುವ ಟೊಮ್ಯಾಟೋ ಇದೀಗ ಪ್ರತಿ ಕೆಜಿಗೆ 250 ರುಪಾಯಿಗೆ ಮಾರಾಟವಾಗುತ್ತಿದೆ. ನಿನ್ನೆ ಮೊನ್ನೆ ಕೆಜೆಗೆ ಎರಡು ನೂರು ರೂಪಾಯಿ ಇದ್ದ ಟೊಮೇಟೊ ಈಗ 250 ರೂಪಾಯಿ ಆಗಿದ್ದು, ಜನರಿಗೆ ಟೊಮೇಟೊ ಮೇಲಿನ ಆಸೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ.
ಸದ್ಯಕ್ಕೆ ಟೊಮೆಟೊ ದರ 250 ಕ್ಕೆ ನಿಲ್ಲದೇ 300ರ ಗಡಿ ಕೂಡ ತಲುಪಬಹುದು ಎಂದು ಹೋಲ್ ಸೇಲ್ ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಬೆಲೆಯೇರಿಕೆಗೆ ಪ್ರಮುಖ ಕಾರಣ ಸಕಾಲಕ್ಕೆ ಮಳೆ ಆಗದಿರುವುದು ಹಾಗೂ ಟೊಮ್ಯಾಟೋದ ಒಳ್ಳೆಯ ಗುಣಮಟ್ಟ, ಪೂರೈಕೆ ಮತ್ತು ಸಾಗಣೆ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಸದ್ಯಕ್ಕೆ ಈ ದರ ಇಳಿಯುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಏನೇ ಆಗಲಿ ಒಟ್ಟಿನಲ್ಲಿ ರೈತರಿಗೆ ಒಳ್ಳೆಯ ಲಾಭ ತಂದು ಕೊಟ್ಟಿದೆ ಎಂದರೂ ತಪ್ಪಾಗಲಾರದು.